ಮಂಗಳವಾರ, ಮೇ 18, 2021
28 °C

ಲಾರಿ ಹರಿದು ತಾಯಿ, ಪುತ್ರಿ ಸಾವು; ನಾಲ್ವರಿಗೆ ಗಂಭೀರ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೋರಬಂಡಾ (ಗುರುಮಠಕಲ್): ತಾಲ್ಲೂಕಿನ ಬೋರಬಂಡಾ ಗ್ರಾಮದಲ್ಲಿ ಸೋಮವಾರ ಬಸ್ ನಿಲ್ದಾಣದ ಬಳಿ ನಿಂತವರ ಮೇಲೆ ಲಾರಿ ಹರಿದು ತಾಯಿ ಮತ್ತು ಮಗಳು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸರೋಜಾ ಸಕ್ರ್ಯಾ ನಾಯಕ್ (28) ಮತ್ತು ಅವರ ಪುತ್ರಿ ಮೋನಿಕಾ (3) ಮೃತರು. ಅನಿಲ್ ಬುದ್ಯಾ ನಾಯಕ (20), ಗೋರಿಬಾಯಿ ಟೀಕ್ಯಾ ನಾಯಕ್ (40), ಟೀಕ್ಯಾ ನಾಯಕ್ ರೂಪ್ಲಾ ನಾಯಕ್ (46), ಪಾರ್ತಿಬಾಯಿ ಪಾಪ್ಯಾ ನಾಯಕ್ (33) ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಯುಗಾದಿ ಹಬ್ಬಕ್ಕಾಗಿ ಬಟ್ಟೆ ಮತ್ತು ಸಾಮಗ್ರಿ ಖರೀದಿಸಲು ಗುರುಮಠಕಲ್‌ಗೆ ತೆರಳುವ ಬಸ್‌ಗಾಗಿ ಜನರು ಕಾಯುತ್ತಿದ್ದರು. ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯು ಜನರ ಮೇಲೆ ಹಾಯ್ದಿದ್ದು, ಜೊತೆಗೆ ಜೀಪ್‌ಗೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಲಾರಿ ಚಾಲಕನನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು