ಸುರಪುರ: ‘ಮಠ, ಮಂದಿರಗಳು ಮಾನವ ಕುಲಕ್ಕೆ ಜ್ಞಾನ, ಸಂಸ್ಕಾರ, ಶಾಂತಿ, ನೆಮ್ಮದಿ ನೀಡುವ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮೂಹಿಕ ಪರಿಕಲ್ಪನೆಗಳನ್ನು ಬಿತ್ತುವ ತಾಣಗಳು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ ಹೇಳಿದರು.

ಕಡ್ಲಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಯ ಸುವರ್ಣ ಪುಣ್ಯ ಸ್ಮರಣೋತ್ಸವ, ಪೀಠಾಧಿಪತಿ ಪ್ರಭುಲಿಂಗ ಸ್ವಾಮೀಜಿಯ ಷಷ್ಠಬ್ದಿ ಸಮಾರಂಭ ಹಾಗೂ ರಜತ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಸಾಧಕರಿಗೆ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಡಚಣ ವಿರಕ್ತ ಮಠದ ಷಡಕ್ಷರಿ ಸ್ವಾಮೀಜಿ, ವಡವಡಗಿ ನಂದಿ ಮಠದ ವೀರಸಿದ್ದ ಸ್ವಾಮೀಜಿ, ಬಳ್ಳಾರಿಯ ಸಿದ್ಧಬಸವ ಸ್ವಾಮೀಜಿ ಸಂದೇಶ ನೀಡಿದರು.

ಪ್ರಭುಲಿಂಗ ಸ್ವಾಮೀಜಿಯ ಅಭಿನಂದನಾ ಗ್ರಂಥ ಬಿಡುಗಡೆ ಗೊಳಿಸಲಾಯಿತು. ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ ಶರಣರ ಜೀವನ ದರ್ಶನ ಪ್ರವಚನ ನಡೆಸಿಕೊಟ್ಟರು. ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಮುಖರಾದ ರಾಮನಗೌಡ ಸುಬೇದಾರ, ಶಂಕರ ನಾಯಕ, ಮಹೇಶ ಪಾಟೀಲ, ಸಿದ್ದನಗೌಡ ಪಾಟೀಲ, ನಾರಾಯಣ ಸಿಂಗಾಡೆ, ಸುಗೂರೇಶ ಮಡ್ಡಿ, ಕೃಷ್ಣಾರೆಡ್ಡಿ ಮುದ್ನೂರು ವೇದಿಕೆಯಲ್ಲಿದ್ದರು.

ಪ್ರಕಾಶ ಅಂಗಡಿ ನಿರೂಪಿಸಿದರು. ಸಿದ್ದಲಿಂಗಯ್ಯ ಶಾಸ್ತ್ರಿ ವಂದಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಸುರೇಶ ಸಜ್ಜನ (ಸಹಕಾರ), ಹಣಮಂತ ಈರಗೋಟ ನರಸಿಂಗಪೇಟೆ (ಜಾನಪದ), ಮಲ್ಲಿಕಾರ್ಜುನ ಸತ್ಯಂಪೇಟೆ (ಎಂ.ಡಿ.ನಂಜುಂಡಸ್ವಾಮಿ ಪ್ರಶಸ್ತಿ ಪುರಸ್ಕೃತ), ಲಕ್ಷ್ಮಣ ಗುತ್ತೇದಾರ್ (ಜಾನಪದ ಲೋಕ ಸಿರಿ ಪ್ರಶಸ್ತಿ ಪುರಸ್ಕೃತ), ಜಾವೇದ್ ಹುಸೇನ್ ಜಮಾದಾರ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ) ಅವರಿಗೆ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.