ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ನೋಟ: ದರ ಏರಿಕೆ ಲಾಭ ಸ್ಥಳೀಯ ರೈತರಿಗಿಲ್ಲ

ವಿವಿಧ ಜಿಲ್ಲೆಗಳಲ್ಲಿ ಮಳೆ; ಏರಿಳಿಕೆಯಾಗುತ್ತಿರುವ ತರಕಾರಿ ದರ
Last Updated 12 ಅಕ್ಟೋಬರ್ 2021, 1:04 IST
ಅಕ್ಷರ ಗಾತ್ರ

ಯಾದಗಿರಿ: ವಿವಿಧ ಜಿಲ್ಲೆಗಳಲ್ಲಿ ಮಳೆ ಹೆಚ್ಚಾದ ಕಾರಣ ಜಿಲ್ಲೆಯಲ್ಲಿ ತರಕಾರಿ ದರದಲ್ಲಿ ಏರಿಕೆಯಾಗಿದೆ.

ಸದ್ಯ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ತರಕಾರಿ ಆವಕ ಕಡಿಮೆ ಪ್ರಮಾಣ ಬರುತ್ತಿದ್ದು, ಅಕ್ಕಪಕ್ಕದ ಜಿಲ್ಲೆಗಳನ್ನೇ ಆಶ್ರಯಿಸಬೇಕಾಗಿದೆ.

ಜಿಲ್ಲೆಗೆ ರಾಯಚೂರು, ಕಲಬುರಗಿ, ಬೆಳಗಾವಿ, ಚಿಕ್ಕಬಳ್ಳಾಪುರ ಇನ್ನಿತರ ಕಡೆಯಿಂದ ತರಕಾರಿ ಬರುತ್ತದೆ. ಆದರೆ ಆಯಾ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾದ ಕಾರಣ ತರಕಾರಿ ಹಾಳಾಗಿದೆ. ಇದರಿಂದ ಅಲ್ಲಿಂದ ಇಲ್ಲಿಗೆ ಬರುವ ಸಾಗಣೆ ವೆಚ್ಚ ಸೇರಿ ಅಧಿಕ ದರ ಗ್ರಾಹಕರ ಮೇಲೆ ಬೀಳುತ್ತಿದೆ.

ವಿವಿಧ ತರಕಾರಿಗಳಲ್ಲಿ ಎರಡ್ಮೂರು ವಿಧಗಳಿದ್ದು, ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿಯಾಗಿದೆ. ಟೊಮೆಟೊ ಮತ್ತು ಈರುಳ್ಳಿಯಲ್ಲಿ ಹಳೆ ಮತ್ತು ಹೊಸ ತರಕಾರಿಗೆ ದರ ವ್ಯಾತ್ಯಸವಾಗಿದೆ.

ಬೆಳ್ಳುಳ್ಳಿ ₹100–120 ಇದ್ದರೆ, ನುಗ್ಗೆಕಾಯಿ ₹100–120ರ ತನಕ ದರವಿದೆ. ದರ ಹೆಚ್ಚಿದ್ದರೂ ಸ್ಥಳೀಯ ರೈತರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಬೇರೆ ಜಿಲ್ಲೆಗಳನ್ನೇ ಅವಲಂಬಿಸಿದ್ದರಿಂದ ಇಲ್ಲಿಯ ರೈತರಿಗೆ ಲಾಭವಾಗುತ್ತಿಲ್ಲ.

ಸೊಪ್ಪುಗಳ ದರ:ಮೆಂತೆ ಸೊಪ್ಪು ದೊಡ್ಡ ಗಾತ್ರದು ₹30–25, ಪಾಲಕ್‌ ಸೊಪ್ಪು ಒಂದು ಕಟ್ಟು ₹10, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹ 5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ದೊಡ್ಡ ಗಾತ್ರದು ಕಟ್ಟು ₹10, ಕೋತಂಬರಿ ಸೊಪ್ಪು ದೊಡ್ಡ ಗಾತ್ರದ ಒಂದು ಕಟ್ಟು ₹25–30 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹20 ದರ ಇದೆ.

ತರಕಾರಿ ದರ
(ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ; 50-40
ಬದನೆಕಾಯಿ;60–70
ಬೆಂಡೆಕಾಯಿ;50–60
ದೊಣ್ಣೆಮೆಣಸಿನಕಾಯಿ;50–60
ಆಲೂಗಡ್ಡೆ; 35-30
ಈರುಳ್ಳಿ; 50–45
ಎಲೆಕೋಸು;40–35
ಹೂಕೋಸು; 60–50
ಚವಳೆಕಾಯಿ;60–65
ಬೀನ್ಸ್; 50–60
ಗಜ್ಜರಿ;80-100
ಸೌತೆಕಾಯಿ; 60–50
ಮೂಲಂಗಿ;40-35
ಮೆಣಸಿನಕಾಯಿ;40-35
ಸೋರೆಕಾಯಿ;40–30
ಬಿಟ್‌ರೂಟ್;50-60
ಹೀರೆಕಾಯಿ;50-60
ಹಾಗಲಕಾಯಿ; 60-70
ತೊಂಡೆಕಾಯಿ; 40-50
ಅವರೆಕಾಯಿ; 50–60

***

ಎಲ್ಲ ವಿಧದ ತರಕಾರಿ ದರ ಏರಿಕೆಯಾಗಿದೆ. ಬೇರೆ ಜಿಲ್ಲೆಗಳಿಂದ ಆವಕ ಬರುತ್ತಿದ್ದು, ಅಲ್ಲಿಯೂ ಮಳೆಯಾಗಿದ್ದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ
ಬಸು ಚಿಂತನಹಳ್ಳಿ, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT