ಯಾದಗಿರಿ: ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿ ಹಿಂಭಾಗದಲ್ಲಿ ವಿದ್ಯುತ್ ಲೈನ್ ಸ್ಪರ್ಶಿಸಿ ತೀವ್ರ ಗಾಯಗೊಂಡಿದ್ದ ಮಂಗವನ್ನು ಆಯೋಗದ ಅಧಿಕಾರಿಗಳು ರಕ್ಷಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

‘ಮಂಗವೊಂದು ವಿದ್ಯುತ್ ಪರಿವರ್ತಕದ ಮೇಲೆ ಕುಳಿತಿತ್ತು. ಏಕಾಏಕಿ ವಿದ್ಯುತ್ ಲೈನ್ ಸ್ಪರ್ಶದಿಂದ ಕೆಳಗೆ ಬಿದ್ದು, ಎದ್ದೆಳಲು ಆಗುತ್ತಿರಲಿಲ್ಲ. ಜೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಅರಣ್ಯ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಯಿತು’ ಎಂದು ಆಯೋಗದ ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಬಿ. ಒಡೆಯಾರ್ ತಿಳಿಸಿದರು.

‘ಜೆಸ್ಕಾಂನ ಮರ್ದಾನಪ್ಪ, ಅಶೋಕ ಚವ್ಹಾಣ್, ಪಶು ಸಂಗೋಪನಾ ಇಲಾಖೆಯ ಡಾ.ದೇಶಮುಖ, ಮೊಹಮದ್ ಮುಸ್ತಾಕ್, ಅರಣ್ಯ ಇಲಾಖೆಯ ಬುರೊದ್ದೀನ್ ಸ್ಥಳಕ್ಕೆ ಬಂದರು. ಗಾಯಗೊಂಡಿದ್ದ ಮಂಗಕ್ಕೆ ಚಿಕಿತ್ಸೆ ಕೊಟ್ಟು ಅರಣ್ಯ ಪ್ರದೇಶದತ್ತ ಒಯ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.