ಯಾದಗಿರಿ ಗಾಂಧಿ ವೃತ್ತದಲ್ಲಿ ಪತ್ರಿಕೆಗಳನ್ನು ಮಾರುತ್ತಿರುವ ವಿತರಕ
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಆರೋಗ್ಯ ವಿಮೆಯೂ ಕಲ್ಪಿಸಬೇಕು. ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ವ್ಯಾಪ್ತಿಗೆ ನಮ್ಮನ್ನೂ ಸೇರಿಸಬೇಕು
ನಾಗಪ್ಪ ನಾಯ್ಕಲ್ ವಿತರಕ
ಇಂದಿನ ದುಬಾರಿಯ ದುನಿಯಾದಲ್ಲಿ ಪತ್ರಿಕೆ ವಿತರಣೆ ಮಾಡುತ್ತಾ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟ. ಸರ್ಕಾರ ವಿತರಕರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು
ಭೀಮರಾಯ ಕುಲಕರ್ಣಿ ವಿತರಕ
20 ವರ್ಷಗಳಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಸರ್ಕಾರದ ಯಾವುದೇ ಸವಲತ್ತು ಸಿಕ್ಕಿಲ್ಲ. ನಗರಸಭೆಯು ಪತ್ರಿಕಾ ವಿತರಿಕರಿಗೆ ನಿವೇಶನಗಳನ್ನು ಕೊಡಬೇಕು
ಅಮರಯ್ಯ ಸ್ವಾಮಿ ವಿತರಕ
ನಾನು 6ನೇ ತರಗತಿಯಿಂದ ಪತ್ರಿಕೆಗಳ ವಿತರಣೆ ಮಾಡುತ್ತಿದ್ದೇನೆ. ಇದೇ ಕಾಯಕದಲ್ಲಿ ಇದ್ದಕೊಂಡು ಇಬ್ಬರು ಮಕ್ಕಳಿಗೆ ಎಂಜಿನಿಯರ್ ಓದಿಸಿದ್ದೇನೆ. ಒಬ್ಬರು ಡಾಕ್ಟರ್ ಮತ್ತೊಬ್ಬರು ಬಿ.ಇಡಿ ಮುಗಿಸಿದ್ದಾರೆ. ಮೂವರ ಮದುವೆಯೂ ಮಾಡಿದ್ದೇನೆ