ಬುಧವಾರ, ನವೆಂಬರ್ 25, 2020
24 °C
ನಗರಸಭೆ ನೂತನ ಅಧ್ಯಕ್ಷ ವಿಲಾಸ ಪಾಟೀಲ ಅಭಿಮತ

ಒಂದು ಕ್ಷಣವೂ ವ್ಯರ್ಥ ಮಾಡುವುದಿಲ್ಲ: ನೂತನ ಅಧ್ಯಕ್ಷ ವಿಲಾಸ ಪಾಟೀಲ ಅಭಿಮತ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ ನಗರಸಭೆಯಲ್ಲಿ ಪ‍್ರಥಮವಾಗಿ ಬಿಜೆಪಿ ಅಧಿಕಾರಿಕ್ಕೇರಿದೆ. ಕಳೆದ ಎರಡು ವರ್ಷಗಳಿಂದ ಜನರಿಂದ ಆಯ್ಕೆಯಾಗಿದ್ದರೂ ಮೀಸಲಾತಿ ಗೊಂದಲದಿಂದ ‘ಅಧಿಕಾರ’ ದಕ್ಕಿರಲಿಲ್ಲ. ಅಕ್ಟೋಬರ್ 29ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ನಗರಸಭೆ ಅಧ್ಯಕ್ಷರಾಗಿ 3ನೇ ವಾರ್ಡ್‌ನ ವಿಲಾಸ ಪಾಟೀಲ, ಉಪಾಧ್ಯಕ್ಷೆಯಾಗಿ 9ನೇ ವಾರ್ಡ್‌ನ ಪ್ರಭಾವತಿ ಮಾರುತಿ ಕಲಾಲ್‌ ಅವರು ಆಯ್ಕೆಯಾಗಿದ್ದಾರೆ.

ನವೆಂಬರ್ 2 ರಂದು ಅಧಿಕಾರ ಸ್ವೀಕರಿಸಿರುವ ಅವರು, ತಮ್ಮ ಮುಂದಿರುವ ಸವಾಲುಗಳು, ಆದ್ಯತೆಗಳ ಕುರಿತು ‘ಪ್ರಜಾವಾಣಿ‘ ಜತೆ ಮಾತನಾಡಿದ್ದಾರೆ.

* ನಗರದಲ್ಲಿ ಯಾವ ಕೆಲಸಗಳಿಗೆ ಆದ್ಯತೆ ನೀಡುತ್ತೀರಿ?

–ಮೂಲಸೌಕರ್ಯ ಕಲ್ಪಿಸಲು ಹೆಚ್ಚು ಒತ್ತು ನೀಡುತ್ತೇನೆ. ಸ್ವಚ್ಛತೆ ಕೊರತೆ ಇದೆ. ನಗರವನ್ನು ಕೊಳೆಗೇರಿ ಮುಕ್ತ ಮಾಡಲು ಆದ್ಯತೆ ನೀಡುತ್ತೇನೆ. ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಲು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ.

* ನಿಮ್ಮ ಅಧಿಕಾರಾವಧಿ 15 ತಿಂಗಳು ಇದೆ. ಅದನ್ನು ಹೇಗೆ ಉಪಯೋಗ ಮಾಡಿಕೊಳ್ಳುತ್ತೀರಿ?

–ಅಧಿಕಾರದಲ್ಲಿ ಇರುವವರೆಗೆ ಒಂದು ಕ್ಷಣವನ್ನೂ ವ್ಯರ್ಥ ಮಾಡುವುದಿಲ್ಲ. ಎಲ್ಲಿ ಯಾವ ಕಾಮಗಾರಿ ಸ್ಥಗಿತವಾಗಿದೆ ಎಂದು ನೋಡಿ ಅದನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ಕೊಡುತ್ತೇನೆ. ಸದಸ್ಯರ, ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸುತ್ತೇನೆ.

* ನಿಮ್ಮ ಮುಂದಿರುವ ಸವಾಲುಗಳು ಏನು?

–ಎರಡು ವರ್ಷಗಳಿಂದ ಅಧಿಕಾರ ಇಲ್ಲದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ನೇತೃತ್ವದಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜನರ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. 

***

‘ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ’
ಪ್ರಭಾವತಿ ಮಾರುತಿ ಕಲಾಲ್‌,  ನಗರಸಭೆ ಉಪಾಧ್ಯಕ್ಷೆ

* ಪ್ರಶ್ನೆ: ನಗರದಲ್ಲಿ ಯಾವ ಕೆಲಸಗಳಿಗೆ ಆದ್ಯತೆ ನೀಡುತ್ತೀರಿ?

ಸಾರ್ವಜನಿಕರ ಯಾವ ಕೆಲಸಗಳು ಬಾಕಿ ಉಳಿದಿವೆ ಎಂಬುದನ್ನು ಪರಿಶೀಲಿಸಿ ಅವುಗಳನ್ನು ತ್ವರಿತವಾಗಿ ಮಾಡಿಕೊಡಲಾಗುವುದು. ಪ್ರಮುಖವಾಗಿ ಮಹಿಳಾ ಶೌಚಾಲಯ ನಿರ್ಮಿಸಲು ಆದ್ಯತೆ ನೀಡುತ್ತೇನೆ. ರಸ್ತೆ ದುರಸ್ತಿಗೂ ಒತ್ತು ಕೊಡಲಾಗುವುದು ನೀಡಲಾಗುವುದು.

* ಪ್ರಶ್ನೆ: 15 ತಿಂಗಳ ಅಧಿಕಾರಾವಧಿ ಹೇಗೆ ಉಪಯೋಗ ಮಾಡಿಕೊಳ್ಳುತ್ತೀರಿ?

ನಮಗೆ ಸಿಕ್ಕಿರುವ ಅವಧಿಯನ್ನು ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುವುದು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನೇರವಾಗಿ ನಮ್ಮ ಬಳಿ ಹೇಳಿಕೊಳ್ಳಲು ವ್ಯವಸ್ಥೆ ಮಾಡುತ್ತೇನೆ. ಮಹಿಳಾ ಸಮಸ್ಯೆಗಳಿಗೆ ಕಿವಿಯಾಗುತ್ತೇನೆ.

* ಪ್ರಶ್ನೆ: ನಿಮ್ಮ ಮುಂದಿರುವ ಸವಾಲುಗಳು ಏನು?

ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ. ಅಧಿಕಾರಿಗಳು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸಲಾಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.