ಶುಕ್ರವಾರ, ಮೇ 14, 2021
31 °C
7 ಸಿಬ್ಬಂದಿ ವಜಾ, ತಪ್ಪದ ಬಸ್‌ಗಾಗಿ ಕಾಯುವಿಕೆ

ಯಾದಗಿರಿ ಜಿಲ್ಲೆಯಲ್ಲಿ 101 ಬಸ್‌ಗಳ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 12ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ 101 ಬಸ್‌ಗಳ ಕಾರ್ಯಾಚರಣೆ ಮಾಡಿವೆ.

ಯಾದಗಿರಿ ಬಸ್‌ ಡಿಪೋದಿಂದ 53, ಶಹಾಪುರದಿಂದ 28, ಸುರಪುರದಿಂದ 12, ಗುರುಮಠಕಲ್‌ನಿಂದ 10 ಸೇರಿದಂತೆ 103 ಬಸ್‌ಗಳು ಕಾರ್ಯಾಚರಣೆ ಮಾಡಿವೆ.

ಬೆರಳೆಣೆಕೆ ಬಸ್‌ಗಳ ಕಾರ್ಯಾಚರಣೆ ಮಾಡುತ್ತಿರುವುದರಿಂದ ಅಂತರ ಜಿಲ್ಲೆಗೆ ತೆರಳುವ ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ.

ತಪ್ಪದ ಕಾಯುವಿಕೆ: ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್‌ಗಳಿಗಾಗಿ ಕಾಯುವುದು ಇನ್ನೂ ತಪ್ಪಿಲ್ಲ. ಗಂಟೆಗಟ್ಟಲೇ ಬಸ್‌ ನಿಲ್ದಾಣಗಳಲ್ಲಿ ಕಾದು ಕುಳಿತುಕೊಂಡ ನಂತರ ಬಸ್‌ ಬರಬಹುದು ಬರದೇ ಇರುವ ಆತಂಕದಲ್ಲಿ ಪ್ರಯಾಣಿಕರು ಇದ್ದಾರೆ.

ಖಾಸಗಿ ವಾಹನಗಳ ದರ್ಬಾರ್‌: ಸಾರಿಗೆ ನೌಕರರ ಮುಷ್ಕರದಿಂದ ಖಾಸಗಿ ವಾಹನಗಳನ್ನು ಬಸ್‌ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಇದರಿಂದ ಖಾಸಗಿ ವಾಹನಗಳ ದರ್ಬಾರ್‌ ನಡೆಯುತ್ತಿದೆ.

7 ಸಿಬ್ಬಂದಿ ವಜಾ: ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದ್ದು, ನೋಟಿಸ್‌ ನೀಡಿದ್ದರೂ ಹಾಜರಾಗದಿದ್ದರಿಂದ 7 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.

***

ಬಸ್ ನಿಲ್ದಾಣ ಸುತ್ತಮುತ್ತ ನಿಷೇಧಾಜ್ಞೆ
ಯಾದಗಿರಿ ಜಿಲ್ಲೆಯ ಎಲ್ಲ ಬಸ್‌ ನಿಲ್ದಾಣ, ಡಿಪೋ, ವಿಭಾಗೀಯ ಕಚೇರಿ ಬಳಿಯ ಸುತ್ತಮುತ್ತದ ಪ್ರದೇಶದ 200 ಮೀಟರ್ ವ್ಯಾಪ್ತಿಯಲ್ಲಿ ಏಪ್ರಿಲ್‌ 18ರ ಮಧ್ಯರಾತ್ರಿಯಿಂದ ಏ.30ರ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಒಕ್ಕೂಟ ಅನಿರ್ದಿಷ್ಟವಧಿ ವರೆಗೆ ಮುಷ್ಕರ ಹಮ್ಮಿಕೊಂಡಿದೆ. ನೌಕರರ ಬೆಂಬಲವಾಗಿ ದಲಿತಪರ ಸಂಘಟನೆಗಗಳಾದ ಡಿಎಸ್‌ಎಸ್‌, ಪ್ರಗತಿ ಪರ ಕರವೇ ಇತ್ಯಾದಿ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸುತ್ತಿದ್ದು, ಇದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ಜಿಲ್ಲಾಧಿಕಾರಿ ನಿಷೇಧಾಜ್ಞೆ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು