ಯರಗೋಳ: ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಗುರುವಾರ (ಮಾ.23) ಗ್ರಾಮಕ್ಕೆ ಆಗಮಿಸಲಿದ್ದು ಬೃಹತ್ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ.
ಗ್ರಾಮದ ಹೊರವಲಯದ 40 ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದ್ದು 50 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಅಂದು ಸಂಜೆ 4 ಗಂಟೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಗುರುಮಠಕಲ್ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ ತಿಳಿಸಿದರು.
ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಮಾತನಾಡಿದ ಶರಣಗೌಡ ಕಂದಕೂರ, ‘ನಾಲವಾರ ಕ್ರಾಸ್‌ನಿಂದ ಬೈಕ್ ಜಾಥಾ ನಡೆಯಲಿದ್ದು, ಗ್ರಾಮ ಪ್ರವೇಶಿಸುತ್ತಿದ್ದಂತೆ ಪೂರ್ಣ ಕುಂಭದೊಂದಿಗೆ ಮಹಿಳೆಯರು ಕುಮಾರಸ್ವಾಮಿ ಯವರನ್ನು ಸ್ವಾಗತಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ನಾರಾಯಣಪೇಟ ಶಾಸಕ ಎಸ್.ಆರ್.ರಡ್ಡಿ, ಶಾಸಕ ನಾಗನಗೌಡ ಕಂದಕೂರ, ಪಕ್ಷದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಧಾನ ವೇದಿಕೆಗೆ ದಿ.ಸದಾಶಿವರಡ್ಡಿ ಕಂದಕೂರ ಹೆಸರು ಇಡಲಾಗಿದೆ. ಇಡೀ ಸಮಾವೇಶದ ಪ್ರಾಂಗಣದಲ್ಲಿ ಸಿಸಿ ಟಿವಿ ಕಣ್ಗಾವಲು, ವೇದಿಕೆ ಎಡಭಾಗದಲ್ಲಿ 1 ಲಕ್ಷ ಜನರಿಗೆ ಭೋಜನದ ವ್ಯವಸ್ಥೆ, 20 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ನಾನು ಇದೇ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ್ದೆ. ಈಗ ಇಲ್ಲಿಂದಲೇ ಚುನಾವಣೆ ಕಹಳೆ ಮೊಳಗಿಸುತ್ತಿದ್ದೇನೆ ಎಂದರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೆಟ್ಟಿ, ಪ್ರಮುಖರಾದ ಮಲ್ಲನಗೌಡ ಹಳಿಮನಿ ಕೌಳೂರು, ಸುಭಾಶ್ಚಂದ್ರ ಕಟಕಟಿ, ಅಮರೇಶ ರಾಠೋಡ್, ಶಾಂತಪ್ಪ ಜಾಧವ್, ಮಾರ್ಕಂಡಪ್ಪ ಮನೆಗಾರ, ಶಿವಣ್ಣ ಇರಿಕೇರಿ, ಶಂಕ್ರಪ್ಪ ದಿಬ್ಬ, ಚನ್ನಬಸಪ್ಪ ಜೋಗಿ, ಪ್ರಭುಗೌಡ ಸೇರಿದಂತೆ ಪಕ್ಷದ ಕಾರ್ಯಕರ್ತರು
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.