ಇಲ್ಲಿಯವರೆಗೆ ಒಟ್ಟು 52 ವಾಂತಿ ಭೇದಿ ಪ್ರಕರಣಗಳು ಕಂಡು ಬಂದಿವೆ. 6 ಮಕ್ಕಳನ್ನು ಶಹಾಪುರ ಮಕ್ಕಳ ತಜ್ಞರ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಮುದಾಯ ಆಸ್ಪತ್ರೆಯ ಎಲ್ಲ ಬೆಡ್ ಗಳು ಭರ್ತಿಯಾಗಿವೆ. ಅವಿರತ ಸೇವೆಯಲ್ಲಿ ವೈದ್ಯ, ಸಿಬ್ಬಂದಿ ನಿರತರಾಗಿದ್ದಾರೆ. ಸುರಪುರ ಅಸ್ಪತ್ರೆಗೆ ಹೆಚ್ಚಿನ ರೋಗಿಗಳನ್ನು ಕಳಿಸಲು ವ್ಯವಸ್ಥೆ ಮಾಡಲಾಗಿದೆ.