ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ ಗರಿಗೆದರಿದ ರಾಜಕೀಯ 

Last Updated 5 ಡಿಸೆಂಬರ್ 2020, 3:12 IST
ಅಕ್ಷರ ಗಾತ್ರ

ಹುಣಸಗಿ: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿಯಾಗುತಿದ್ದಂತೆ ತಾಲ್ಲೂಕಿನ ರಾಜಕಿಯ ಚಟುವಟಿಕೆಗಳು ಗರಿಗೆದರಿದ್ದು, ಗ್ರಾಮಗಳಲ್ಲಿ ಹೊಸ ಅಲೆ ಆರಂಭವಾಗಿದೆ.

ದಿನವೂ ಬೆಳಿಗ್ಗೆ ಚಳಿ ಹೆಚ್ಚಾಗುತ್ತಿದ್ದರೆ, ಗ್ರಾಮಮಟ್ಟದ ರಾಜಕೀಯದ ಕಾವು ಕೂಡಾ ಅದೇ ವೇಗ ಪಡೆದುಕೊಳ್ಳುತ್ತಿದೆ. ಬಹುತೇಕ ರೈತಾಪಿ ವರ್ಗ ತಮ್ಮ ಹೊಲದಲ್ಲಿನ ಭತ್ತವನ್ನು ಕಟಾವು ಮಾಡಿ ರಾಶಿ ಮಾಡಿ ಒಂದೆಡೆ ಹಾಕುವುದರಲ್ಲಿ ನಿರತರಾಗುತ್ತಿದ್ದರೇ ರಾಜಕೀಯ ತುಡಿತ ಹೊಂದಿರುವ ಕೆಲವರು ತಮ್ಮದೇ ಜಾತಿ, ಹಣ, ಕುಟುಂಬದ ಲೆಕ್ಕಾಚಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಈಗಾಗಲೇ ಗ್ರಾಮ ಮಟ್ಟದಲ್ಲಿ ತಮ್ಮ ಮುಖಂಡರ ಮಖಾಂತರ ಪಕ್ಷಾಂತರ ಪರ್ವ ಆರಂಭವಾಗಿದ್ದು, ನಿತ್ಯವೂ ಪಕ್ಷ ಬಿಟ್ಟು ಬೇರೆ ಪಕ್ಷ ಸೇರುವ ಕಾರ್ಯಕ್ರಮಗಳಲ್ಲಿ ಅಲ್ಲಲ್ಲಿ ಆರಂಭವಾಗಿದೆ. ಚುನಾವಣೆ ಸ್ಪರ್ಧಿಸಲು ಅಣಿಯಾಗುತ್ತಿರುವವರು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದು, ಮತದಾರರ ಮನೆ ಭೇಟಿ, ಉಭಯ ಕುಶಲೋಪಚಾರ ನಡೆಯುತ್ತಿದೆ. ಕೆಲವರು ತಮ್ಮ ಗ್ರಾ.ಪಂಗೆ ಭೇಟಿ ನೀಡಿ ತಮ್ಮ ವಾರ್ಡ್‌ ಸಂಖ್ಯೆ ಮತದಾರರು ಮತ್ತು ಚುನಾವಣೆ ಸ್ಪರ್ಧಿಸಲು ಬೇಕಾಗುವ ಕಾಗದ ಪತ್ರಗಳನ್ನು ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.

ಹುಣಸಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 18 ಗ್ರಾಮ ಪಂಚಾಯಿತಿಗಳು ಬರುತ್ತಿದ್ದು, ಈ ಎಲ್ಲ ಪಂಚಾಯಿತಿಗಳಿಗೂ ಮೊದಲ ಹಂತದಲ್ಲಿಯೇ ಮತದಾನ ನಡೆಯಲಿದೆ ಎಂದು ಹುಣಸಗಿ ತಹಶೀಲ್ದಾರ್ ವಿನಯ ಕುಮಾರ ಪಾಟೀಲ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಒಟ್ಟು 58,858 ಪುರುಷ ಮತದಾರರು, 57,090 ಮಹಿಳಾ ಮತದಾರರು, ಇತರ ಮತದಾರರು 11 ಇದ್ದು ಒಟ್ಟು ಹುಣಸಗಿ ತಾಲ್ಲೂಕಿನಲ್ಲಿ 1,15, 959 ಮತದಾರರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

25 ಸ್ಥಾನಗಳಿರುವ ಹೆಬ್ಬಾಳ.ಬಿ ಗ್ರಾಪಂ ಅತಿ ಹೆಚ್ಚು 8,122 ಮತದಾರರನ್ನು ಹೊಂದಿದ್ದು, 17 ಸ್ಥಾನಗಳನ್ನು ಹೊಂದಿರುವ ಹಗರಟಗಿ ಗ್ರಾಪಂ ಕಡಿಮೆ 4,940 ಮತದಾರರನ್ನು ಹೊಂದಿದೆ. ಆದರೆ ಅಗ್ನಿ ಗ್ರಾಪಂ ಕಡಿಮೆ ಅಂದರೆ 15 ಸದಸ್ಯ ಬಲ ಹೊಂದಿದ್ದು, 5,023 ಮತದಾರರನ್ನು ಹೊಂದಿದೆ.

ಹುಣಸಗಿ ತಾಲ್ಲೂಕು ಕೇಂದ್ರವೆಂದು ಘೋಷಣೆಯಾದ ಬಳಿಕ ತಾಲ್ಲೂಕಿನ ಗ್ರಾ.ಪಂ.ಗಳಿಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಹುಣಸಗಿ ತಾಲ್ಲೂಕಿನಲ್ಲಿ ಒಟ್ಟು 18 ಗ್ರಾಮ ಪಂಚಾಯಿತಿಗಳ ಚುನಾವಣೆ ಸದಸ್ಯ ಸ್ಥಾನಗಳು : ಅಗ್ನಿ 15 , ಅರಕೇರಾ ಜೆ 21, ಬೈಚಬಾಳ 21, ಬೈಲಕುಂಟಿ 20, ಬರದೇವನಾಳ 21, ಗೆದ್ದಲಮಾರಿ 19, ಹಗರಟಗಿ 17, ಹೆಬ್ಬಾಳ (ಬಿ) 25 , ಜೊಗಂಡಬಾವಿ 21, ಕಾಮನಟಗಿ 25 , ಕೊಡೇಕಲ್ಲ 22, ಕೋಳಿಹಾಳ 20, ಮಾಳನೂರ 20, ಮಾರನಾಳ 19 , ಮುದನೂರ (ಕೆ) 20, ನಾರಾಯಣಪುರ 24, ರಾಜನಕೋಳೂರ 19, ವಜ್ಜಲ 20 ಸ್ಥಾನಗಳು.

ಗ್ರಾಮ ಪಂಚಾಯಿತಿ ವಿವರ

ಗ್ರಾ.ಪಂ ಹೆಸರು;ಸದಸ್ಯರ ಸಂಖ್ಯೆ;ಪುರುಷ ಮತದಾರರು;ಮಹಿಳಾ ಮತದಾರರು;ಒಟ್ಟು

ಹೆಬ್ಬಾಳ (ಬಿ): 25:4210:3911:8122,

ಕಾಮನಟಗಿ:25:4044:3917:7961

ಗೆದ್ದಲಮಾರಿ:19:3544:3492:7036,

ಬೈಲಕುಂಟಿ:20:3470:3489:6959 ,

ರಾಜನಕೋಳೂರು:19:2886:2854:5741,

ಕೊಡೇಕಲ್ಲ:22:3362:3463:6831,

ಮಾರನಾಳ:19:3104:2859:5963,

ನಾರಾಯಣಪುರ:24:3351:3305:6658

ಜೋಗಂಡಬಾವಿ:21:3175:2999:6174

ಬರದೇವನಾಳ:21:3287:2899:6186,

ಹರಗಟಗಿ:17:2513:2427:4940 ,

ಮಾಳನೂರ:20:3040:2943:6023,

ವಜ್ಜಲ್:20:3186:3032:6218,

ಕೋಳಿಹಾಳ:20:3070:3065:6136,

ಅಗ್ನಿ:15:2574:2449:5023 ,

ಅರಕೇರಾ (ಜೆ):21:3307:3333:6640,

ಬೈಚಬಾಳ:21:3403:3340:6743 ,

ಮುದನೂರ (ಕೆ):20:3332:3273:6605

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT