‘ಆಧ್ಯಾತ್ಮಿಕ ಪ್ರವಚನದಿಂದ ನೆಮ್ಮದಿ’

ಶಹಾಪುರ: ‘ಆಧ್ಯಾತ್ಮಿಕ ಪುರಾಣ ಪ್ರವಚನಗಳು ಪ್ರತಿಯೊಬ್ಬರಿಗೂ ಜೀವನಕ್ಕೆ ಬೆಳಕು ನೀಡಬಲ್ಲವು. ಪ್ರವಚನದಿಂದ ಸನ್ಮಾರ್ಗ ಸಾಧ್ಯ. ಮಾನಸಿನ ನೆಮ್ಮದಿಗೆ ಪ್ರವಚನ ಔಷಧಿಯಾಗಬಲ್ಲದು’ ಎಂದು ಮಾತೋಶ್ರೀ ಶ್ರೀದೇವಿ ತಾಯಿಯವರು ತಿಳಿಸಿದರು.
ನಗರದ ಶ್ರೀದ್ವಾದಶ ಜ್ಯೋತಿರ್ಲಿಂಗೇಶ್ವರ ದೇವಸ್ಥಾನದಲ್ಲಿ 41ನೇ ವರ್ಷದ ವಾರ್ಷಿಕೋತ್ಸವ ಹಾಗೂ ದೇವಸ್ಥಾನ ಜೀರ್ಣೋದ್ಧಾರ ಅಡಿಗಲ್ಲು ಪೂಜಾ ನಿಮಿತ್ತವಾಗಿ ಹಮ್ಮಿಕೊಂಡ ಜ್ಞಾನಾಮೃತ ಪ್ರವಚನದಲ್ಲಿ ಅನುಭಾವ ನೀಡಿದರು.
ಸಮಾರಂಭದ ನೇತೃತ್ವ ವಹಿಸಿಕೊಂಡ ದ್ವಾದಶ ಜ್ಯೋತಿರ್ಲಿಂಗೇಶ್ವರ ದೇವಸ್ಥಾನದ ವಿಶ್ವರಾಧ್ಯ ದೇವರು, ಲೋಕಾಪುರ ಮಹಾಂತ ದೇವರು, ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ದೇಸಾಯಿ,ಮಲ್ಲಿಕಾರ್ಜುನ ಸ್ವಾಮಿ ಬೋಳಾರಿ, ಆರ್.ಎಂ.ಹೊನ್ನಾರಡ್ಡಿ, ಶರಣಗೌಡ ಆಲ್ದಾಳ, ಚೆನ್ನಪ್ಪಗೌಡ ಪಾಟೀಲ ಶಿರವಾಳ,ಸತೀಶ ಪಾಟೀಲ ಕನ್ಯೆಕೊಳ್ಳೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.