ಬುಧವಾರ, ಜನವರಿ 19, 2022
24 °C

ಸುರಪುರ ವಿಜಯೋತ್ಸವ ಸ್ಮಾರಕ ರಕ್ಷಿಸಿ: ರಾಜಾ ವೆಂಕಪ್ಪನಾಯಕ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಕನ್ನಡ ಸಾಹಿತ್ಯ ಸಂಘ ಕನ್ನಡ ಪರ ಚಟುವಟಿಕೆಗಳೊಂದಿಗೆ ಇಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಇರುವ ವಿಜಯೋತ್ಸವ ಸ್ಮಾರಕ ಅಭಿವೃದ್ಧಿ ಪಡಿಸಿ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ರಾಜಾ ವೆಂಕಪ್ಪನಾಯಕ ಸಲಹೆ ನೀಡಿದರು.

ನಗರದ ಕನ್ನಡ ಸಾಹಿತ್ಯ ಸಂಘದ ರಾಜಾ ಮದನಗೋಪಾಲನಾಯಕ ಸ್ಮಾರಕ ಭವನದಲ್ಲಿ ಶನಿವಾರ ಅಯೋಜಿಸಿದ್ದ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದನಾಯಕ ಮಾತನಾಡಿ, ‘ಕನ್ನಡ ಸಾಹಿತ್ಯ ಸಂಘ ಮತ್ತು ರಿಕ್ರಿಯೇಷನ್ ಕ್ಲಬ್ ಎರಡು ಸಂಸ್ಥೆಗಳಿಗೆ ದಿವಂಗತ ರಾಜಾ ಮದನಗೋಪಾಲ ನಾಯಕರ ಕೊಡುಗೆ ಅನನ್ಯ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲಾಗುವುದು’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ ಪ್ರಸ್ತಾವಿಕವಾಗಿ, ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೈದ್ಯರಾದ ಖಾಜಾ ಮೋಯಿ ನುದ್ದೀನ್, ಮಹಾದೇವಪ್ಪ ಪಟ್ಟಣಶೆಟ್ಟಿ ಅವರಿಗೆ ಸಂಘದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಅಮರೇಶ ಕುಂಬಾರ, ಶಿವಕುಮಾರ ಕಮತಗಿ, ಮೌನೇಶಕುಮಾರ ಚಿಕ್ಕನಳ್ಳಿ, ರಾಜು ಕುಂಬಾರ, ಶ್ರೀಕರಭಟ್ ಜೋಷಿ, ಶ್ರೀಪಾದ ಗಡ್ಡದ ಅವರನ್ನು
ಸನ್ಮಾನಿಸಲಾಯಿತು.

ಜಯಲಲಿತಾ ಪಾಟೀಲ, ರಾಘವೇಂದ್ರ ಬಾಡಿಯಾಳ, ಪ್ರಕಾಶಚಂದ ಜೈನ್, ಕೇದಾರನಾಥ ಶಾಸ್ತ್ರಿ, ಕಮಲಾಕರ ಅರಳಿಗಿಡ, ಶ್ರೀಶೈಲ ಯಂಕಂಚಿ, ದೇವು ಹೆಬ್ಬಾಳ, ಎಚ್. ರಾಠೋಡ, ನಬಿಲಾಲ ಮಕಾನದಾರ, ರಾಘವೇಂದ್ರ ಭಕ್ರಿ, ಅನ್ವರ್ ಜಮಾದಾರ, ಲಕ್ಷ್ಮಣ ಗುತ್ತೇದಾರ, ಶಾಂತಪ್ಪ ಬೂದಿಹಾಳ, ಬಿ.ಸಿ.ಎನ್. ದೇಶಮುಖ, ಕುತುಬುದ್ದೀನ್ ಅಮ್ಮಾಪುರ, ಜೈರಾಮ ಇದ್ದರು.

ಸುನಂದಾ ಸಾಲವಾಡಗಿ ಸ್ವಾಗತ ಗೀತೆ ಹಾಡಿದರು. ಉಪಾಧ್ಯಕ್ಷ ಜೆ. ಅಗಸ್ಟಿನ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜಶೇಖರ ನಿರೂಪಿಸಿ, ದೊಡ್ಡಮಲ್ಲಿಕಾರ್ಜುನ ಹುದ್ದಾರ ವಂದಿಸಿದರು.

*

ದಿ.ರಾಜಾ ಮದನಗೋಪಾಲ ನಾಯಕ ಕನ್ನಡ ಸಾಹಿತ್ಯ ಸಂಘವನ್ನು ಆರ್ಥಿಕವಾಗಿ ಸಬಲಗೊಳಿಸಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ

- ಜೆ. ಅಗಸ್ಟಿನ್, ಉಪಾಧ್ಯಕ್ಷ, ಕನ್ನಡ ಸಾಹಿತ್ಯ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು