ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವ ಪ್ರಿಯಾಂಕ್ ಖರ್ಗೆ ಮನೆಗೆ ಚಲೋ ಪ್ರತಿಭಟನೆ

Published : 29 ಸೆಪ್ಟೆಂಬರ್ 2024, 15:12 IST
Last Updated : 29 ಸೆಪ್ಟೆಂಬರ್ 2024, 15:12 IST
ಫಾಲೋ ಮಾಡಿ
Comments

ಬಳಿಚಕ್ರ (ಸೈದಾಪುರ): ‘ಅಕ್ಟೊಬರ್ 1ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿವಾಸಕ್ಕೆ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೊಟಗೇರಾ ತಿಳಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,‘ಗ್ರಾಮ ಪಂಚಾಯಿತಿ ನೌಕರರ 19 ಬೇಡಿಕೆಗಳನ್ನು ಬಗೆಹರಿಸಲು ಒತ್ತಾಯಿಸಿ ಕಳೆದ ಜುಲೈ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟ ಧರಣಿ ನಡೆಯುತ್ತಿದ್ದಾಗ ಇಲಾಖೆ ಅಧಿಕಾರಿಗಳು ಲಖಿತ ಭರವಸೆ ನೀಡಿದ್ದರು. ಸಚಿವರು ದೂರವಾಣಿ ಮುಖಾಂತರ ಭರವಸೆ ನೀಡಿದ್ದರು.

ಗಡವು ಮುಗಿದು ಮೂರು ತಿಂಗಳು ಕಳೆದರೂ ನೌಕರರ ಬೇಡಿಕೆಯೂ ಇತ್ಯರ್ಥವಾಗದ ಕಾರಣ ನೌಕರರ ಹಕ್ಕುಗಳ ರಕ್ಷಣೆಗಾಗಿ ಮತ್ತು ಬೇಡಿಕೆ ಇತ್ಯರ್ಥಕ್ಕಾಗಿ ಸಚಿವರ ಕಲಬುರಗಿ ನಿವಾಸದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲು ರಾಜ್ಯ ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT