ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Last Updated 11 ಜೂನ್ 2021, 16:36 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮುದ್ನಾಳ ಪೆಟ್ರೋಲ್ ಬಂಕ್ ಬಳಿ ತೈಲ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅವಿನಾಶ್ ಜಗನ್ನಾಥ್ ಮಾತನಾಡಿ,ಕೋವಿಡ್‌ ಸಂದರ್ಭದಲ್ಲಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಆ ವೇಳೆ ಕೇಂದ್ರ ಸರ್ಕಾರವು ತೈಲ ಬೆಲೆ ಏರಿಕೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಗನಕ್ಕೇರಿದ ತೈಲಬೆಲೆ ಕಾರಣದಿಂದ ದಿನ ದಿನಬಳಕೆ ವಸ್ತುಗಳ ದರವೂ ಗಗನಕ್ಕೆ ಮುಟ್ಟಲಿದ್ದು, ಕೂಡಲೇ ಕೇಂದ್ರ ಸರ್ಕಾರವು ತೈಲ ಬೆಲೆಯ ಮೇಲಿನ ಸುಂಕವನ್ನು ಇಳಿಸಬೇಕು. ಆಗ ಮಾತ್ರ ಸಾಮಾನ್ಯ ವರ್ಗದ ಜನರಿಗೆ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯಚೆನ್ನಾರಡ್ಡಿ ತುನ್ನೂರ, ಸೇವಾದಳ ಅಧ್ಯಕ್ಷ ಲಕ್ಷ್ಮಣ್ ರಾಥೋಡ್, ಮುಖಂಡರಾದ ವೆಂಕಟೇಶ್ ನಾಗುಂಡಿ, ವಿಶ್ವನಾಥ್ ಮಾಲಿಪಾಟೀಲ, ಕೃಷ್ಣಾ ದಾಸನಕೇರಿ, ಅಭಿಷೇಕ್ ದಾಸನಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT