ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಗದ್ದುಗೆಗೆ ಮೀಸಲಾತಿ ಪ್ರಕಟ

ರಾಜಕೀಯ ಪಕ್ಷಗಳ ಹಿಡಿತಕ್ಕೆ ತಂತ್ರಗಾರಿಕೆ ಶುರು, ಲೆಕ್ಕಾಚಾರದಲ್ಲಿ ತೊಡಗಿದ ಸದಸ್ಯರು
Last Updated 19 ಜನವರಿ 2021, 2:41 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮ ಪಂಚಾಯಿತಿ ಚುನಾವಣೆ ಡಿ.22 ಮತ್ತು 27ರಂದು ನಡೆದಿದ್ದು, ಈಗ ಆಯಾ ಗ್ರಾಮ ಪಂಚಾಯಿತಿಗಳ ಮೀಸಲಾತಿ ಪ್ರಕಟಗೊಂಡಿದೆ.

ಜನವರಿ 18ರಂದು ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ್ದು, ರಾಜಕೀಯ ಪಕ್ಷಗಳು ತಮ್ಮಹಿಡಿತಕ್ಕೆ ತೆಗೆದುಕೊಳ್ಳಲು ತಂತ್ರಗಾರಿಕೆ ಶುರು ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಹಿಡಿತವನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ತಂತ್ರಗಾರಿಕೆಗೆ ಚಾಲನೆ ಸಿಕ್ಕಂತಾಗಿದೆ.

ಚುನಾವಣೆ ಫಲಿತಾಂಶ ಘೋಷಿಸಿದ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳತ್ತ ಆಸೆಗಣ್ಣಿನಿಂದ ಮೀಸಲಾತಿ ಪ್ರಕಟಣೆಗಾಗಿ ಕಾಯುತ್ತಿದ್ದ ಕೆಲವರಿಗೆ ಮೀಸಲಾತಿ ಘೋಷಣೆಯಿಂದ ನಿರಾಸೆಯಾಗಿದೆ.

ಸದಸ್ಯರ ಪ್ರವಾಸ: ಚುನಾವಣೆಯ ಫಲಿತಾಂಶ ಘೋಷಣೆಯ ನಂತರ ಪಕ್ಷಗಳ ಮುಖಂಡರು ಪ್ರಭಾವ ಬೀರಿ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ತಮ್ಮ ಬೆಂಬಲಿತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಹಾಗೂ ಪಂಚಾಯಿತಿ ಗಾದೆಯನ್ನು ತಮ್ಮವರಿಗೇ ಕೊಡಿಸಲೆಂದು ಮೀಸಲಾತಿ ಘೋಷಣೆಗೂ ಮೊದಲೇತಮ್ಮ ಬೆಂಬಲಿಗ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ.

ಸೋಮವಾರ ಮೀಸಲಾತಿ ಫೋಷಣೆಯ ನಂತರ ಇದೀಗ ಮೀಸಲಾತಿಗೆ ತಕ್ಕಂತೆ ತಮ್ಮವರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿಸಿ ಮುಂದಿನ ದಿನಗಳಲ್ಲಿನ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಸಮಯದಲ್ಲಿ ಪ್ರಭಾವ ಬೀರುವ ಕಸರತ್ತಿನಲ್ಲಿ ರಾಜಕೀಯ ಮುಖಂಡರು ತಂತ್ರ ಹೆಣೆಯುವತ್ತ ಗಮನ ಹರಿಸುತ್ತಿದ್ದಾರೆ.

ಮೀಸಲಾತಿ ನಿಗದಿ ಪಡಿಸಿದ ಡಿಸಿ: 2020ನೇ ಸಾಲಿನ ಮೊದಲ 30 ತಿಂಗಳವಧಿಗೆ ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಯಾದಗಿರಿ ತಾಲ್ಲೂಕಿನ 22 ಹಾಗೂ ಗುರುಮಠಕಲ್ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ನಗರದ ಜಿಲ್ಲಾಧಿಕಾರಿ ಕಚೇರಿಯ ಅಡಿಟೋರಿಯಂ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ನೂತನ ಸದಸ್ಯರ ಸಭೆಯಲ್ಲಿಪ್ರಕಟಿಸಿದರು.

ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ ಸ್ಥಾನಗಳ ಮೀಸಲಾತಿ ನಿಗದಿಪಡಿಸುವ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಗುರುಮಠಕಲ್ ತಹಶೀಲ್ದಾರ್‌ ಸಂಗಮೇಶ ಜಿಡಗೆ ಇದ್ದರು.

***

ಯಾದಗಿರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ಮೀಸಲು ನಿಗದಿ ಪಟ್ಟಿ
ಗ್ರಾಮ ಪಂಚಾಯಿತಿ; ಅಧ್ಯಕ್ಷ; ಉಪಾಧ್ಯಕ್ಷ

ಠಾಣಗುಂದಿ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)
ಅರಿಕೇರಾ (ಬಿ); ಪರಿಶಿಷ್ಟ ಜಾತಿ (ಮಹಿಳೆ); ಸಾಮಾನ್ಯ
ಮುದ್ನಾಳ; ಪರಿಶಿಷ್ಟ ಪಂಗಡ (ಮಹಿಳೆ); ಸಾಮಾನ್ಯ
ಯರಗೋಳ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ
ಅಲ್ಲಿಪುರ; ಪರಿಶಿಷ್ಟ ಪಂಗಡ (ಮಹಿಳೆ); ಸಾಮಾನ್ಯ
ಹತ್ತಿಕುಣಿ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)
ಬಂದಳ್ಳಿ; ಪರಿಶಿಷ್ಟ ಜಾತಿ( ಮಹಿಳೆ); ಸಾಮಾನ್ಯ
‌ಹೊನಗೇರಾ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ
ಮುಂಡರಗಿ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ(ಮಹಿಳೆ)
ರಾಮಸಮುದ್ರಾ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)
ಅರಿಕೇರಾ (ಕೆ); ಪರಿಶಿಷ್ಟ ಪಂಗಡ; ಸಾಮಾನ್ಯ (ಮಹಿಳೆ)
ವರ್ಕನಳ್ಳಿ; ಸಾಮಾನ್ಯ; ಪರಿಶಿಷ್ಟ ಪಂಗಡ(ಮಹಿಳೆ)
ಹಳಗೇರಾ; ಸಾಮಾನ್ಯ; ಪರಿಶಿಷ್ಟ ಪಂಗಡ
ಕೌಳೂರು; ಸಾಮಾನ್ಯ; ಪರಿಶಿಷ್ಟ ಜಾತಿ( ಮಹಿಳೆ)
ಮಲ್ಹಾರ; ಸಾಮಾನ್ಯ; ಪರಿಶಿಷ್ಟ ಜಾತಿ( ಮಹಿಳೆ)
ಬಳಿಚಕ್ರ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ
ಬಾಡಿಯಾಳ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)
ಬೆಳಗುಂದಾ; ಪರಿಶಿಷ್ಟ ಜಾತಿ(ಮಹಿಳೆ); ಸಾಮಾನ್ಯ
ಕಡೇಚೂರ; ಪರಿಶಿಷ್ಟ ಜಾತಿ(ಮಹಿಳೆ); ಸಾಮಾನ್ಯ
ಕಿಲ್ಲನಕೇರಾ; ಸಾಮಾನ್ಯ; ಪರಿಶಿಷ್ಟ ಜಾತಿ( ಮಹಿಳೆ)
ಸೈದಾಪುರ; ಸಾಮಾನ್ಯ; ಪರಿಶಿಷ್ಟ ಪಂಗಡ (ಮಹಿಳೆ)
ಮೋಟ್ನಳ್ಳಿ; ಸಾಮಾನ್ಯ(ಮಹಿಳೆ); ಪರಿಶಿಷ್ಟ ಜಾತಿ

***
ಗುರುಮಠಕಲ್ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳ ಮೀಸಲು ನಿಗದಿ ಪಟ್ಟಿ
ಗ್ರಾಮ ಪಂಚಾಯಿತಿ; ಅಧ್ಯಕ್ಷ; ಉಪಾಧ್ಯಕ್ಷ

ಪಸಪುಲ್; ಸಾಮಾನ್ಯ; ಸಾಮಾನ್ಯ
ಯಂಪಾಡ; ಸಾಮಾನ್ಯ; ಪರಿಶಿಷ್ಟ ಜಾತಿ (ಮಹಿಳೆ)
ಮಾಧ್ವಾರ; ಪರಿಶಿಷ್ಟ ಪಂಗಡ (ಮಹಿಳೆ); ಸಾಮಾನ್ಯ
ಮಿನಾಸಪುರ; ಸಾಮಾನ್ಯ; ಸಾಮಾನ್ಯ
ಕಾಳೆಬೆಳಗುಂದಿ; ಸಾಮಾನ್ಯ; ಪರಿಶಿಷ್ಟ ಜಾತಿ (ಮಹಿಳೆ)
ಅಜಲಾಪುರ; ಪ್ರವರ್ಗ-ಅ (ಮಹಿಳೆ); ಪ್ರವರ್ಗ-ಬ
ಜೈಗ್ರಾಮ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ( ಮಹಿಳೆ)
ಯಲಸತ್ತಿ; ಸಾಮಾನ್ಯ (ಮಹಿಳೆ); ಪರಿಶಿಷ್ಟ ಜಾತಿ
ಕೊಂಕಲ್; ಪರಿಶಿಷ್ಟ ಜಾತಿ; ಪ್ರವರ್ಗ-ಅ(ಮಹಿಳೆ)
ಎಲ್ಹೇರಿ; ಪರಿಶಿಷ್ಟ ಜಾತಿ(ಮಹಿಳೆ); ಸಾಮಾನ್ಯ
ಕಂದಕೂರ; ಪರಿಶಿಷ್ಟ ಜಾತಿ; ಸಾಮಾನ್ಯ (ಮಹಿಳೆ)
ಚಿನ್ನಕಾರ; ಪರಿಶಿಷ್ಟ ಜಾತಿ (ಮಹಿಳೆ); ಪ್ರವರ್ಗ-ಅ (ಮಹಿಳೆ)
ಚಪೆಟ್ಲಾ; ಪರಿಶಿಷ್ಟ ಜಾತಿ(ಮಹಿಳೆ); ಸಾಮಾನ್ಯ
ಗಾಜರಕೋಟ; ಪ್ರವರ್ಗ-ಅ (ಮಹಿಳೆ); ಪರಿಶಿಷ್ಟ ಜಾತಿ
ಕಾಕಲವಾರ; ಸಾಮಾನ್ಯ (ಮಹಿಳೆ); ಸಾಮಾನ್ಯ
ಚಂಡರಕಿ; ಸಾಮಾನ್ಯ; ಪರಿಶಿಷ್ಟ ಪಂಗಡ (ಮಹಿಳೆ)
ಅನಪುರ; ಪ್ರವರ್ಗ-ಬ; ಸಾಮಾನ್ಯ ಮಾಹಿಳೆ
ಪುಟಪಾಕ; ಸಾಮಾನ್ಯ; ಸಾಮಾನ್ಯ (ಮಹಿಳೆ)

***
ನೀರು, ರಸ್ತೆ, ಒಳ ಚರಂಡಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮಗಳು ಅಭಿವೃದ್ಧಿ ಕಡೆ ಸಾಗುವಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಪಾತ್ರ ಮಹತ್ವದಾಗಿದೆ.
-ಡಾ.ರಾಗಪ್ರಿಯಾ ಆರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT