ಸೋಮವಾರ, ಜುಲೈ 13, 2020
29 °C

ಯಾದಗಿರಿ | ರಾಹುಲ್‌ ಗಾಂಧಿ ನೆರವು: ಕೇರಳಕ್ಕೆ ತೆರಳಿದ ಶಿಕ್ಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ 15 ಕೇರಳ ಶಿಕ್ಷಕರು, ವಿದ್ಯಾರ್ಥಿಗಳನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೆರವಿನಿಂದ ಕೇರಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲೆಯಿಂದ ಹೊರಟರು.

ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ವಿದ್ಯಾರ್ಥಿಗಳು ಲಾಕ್‌ಡೌನ್‌ ಸಂದರ್ಭದಲ್ಲಿ ನಗರದ ಚಿರಂಜೀವಿ ನಗರದಲ್ಲಿ ವಾಸವಾಗಿದ್ದರು. ಆದರೆ, ಶಾಲೆಗಳು ಪುನಾರಂಭಕ್ಕೆ ಸಾಕಷ್ಟು ಸಮಯ ಇರುವುದರಿಂದ ತಮ್ಮ ತವರೂ ಕೇರಳಕ್ಕೆ ತೆರಳಲು ರಾಹುಲ್‌ ಗಾಂಧಿ ಅವರಿಗೆ ಇ–ಮೇಲ್‌ ಮೂಲಕ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ರಾಯಚೂರಿನ ಕಾಂಗ್ರೆಸ್‌ ಮುಖಂಡ ರವಿ ಬೋಸರಾಜು ಅವರಿಗೆ ಗಾಂಧಿ ತಿಳಿಸಿದ್ದಾರೆ. ಈ ಮೂಲಕ ಅವರು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಕೇರಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

‘ಅದರಂತೆ ಮಂಗಳವಾರ ಸಂಜೆ 7 ಗಂಟೆಗೆ 15 ಜನರನ್ನು ಥರ್ಮಲ್‌ ಸ್ಯಾನಿಂಗ್‌ ಮಾಡಿ ಬಸ್‌ ಮೂಲಕ ಕೇರಳದ ಕೊಲ್ಲಂ ಜಿಲ್ಲೆಗೆ ಕಳುಹಿಸಿಕೊಡಲಾಯಿತು’ ಎಂದು ಕೋವಿಡ್‌ ನೋಡಲ್‌ ಅಧಿಕಾರಿ ರಘುವೀರ್‌ ಸಿಂಗ್ ಠಾಕೂರ್‌ ತಿಳಿಸಿದರು.‌ ಈ ವೇಳೆ ಎಸ್‌ಡಿಸಿ ಸಾಯಿಪ್ರಕಾಶ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು