ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ | ಇಳೆಗೆ ತಂಪೆರೆದ ಮಳೆ: ಜನರಿಗೆ ಸಿಡಿಲಿನ ಭೀತಿ

Published 13 ಮೇ 2024, 15:53 IST
Last Updated 13 ಮೇ 2024, 15:53 IST
ಅಕ್ಷರ ಗಾತ್ರ

ಶಹಾಪುರ: ಬಿರು ಬಿಸಿಲಿನಿಂದ ಕಂಗೆಟ್ಟ ಜನರಿಗೆ ಸೋಮವಾರ ಸುರಿದ ಮಳೆಯು ತಂಪೆರೆಯಿತು. ಅದರ ಬೆನ್ನಲ್ಲೇ ಜೋರಾದ ಗಾಳಿ ಹಾಗೂ ಸಿಡಿಲಿನ ಹೊಡೆತವು ಜನರಲ್ಲಿ ಆತಂಕ ಉಂಟು ಮಾಡಿತು.

ಬೆಳಗಿನ ಜಾವ ಸುಮಾರು ಒಂದು ಗಂಟೆ ಕಾಲ ಜೋರಾದ ಗಾಳಿ, ಸಿಡಿಲಿನ ಸಪ್ಪಳದೊಂದಿಗೆ ಮಳೆರಾಯ ಬಂದು ಕಾದ ಕಬ್ಬಿಣದಂತಾಗಿರುವ ಭೂಮಿಯನ್ನು ತಂಪಾಗಿಸಿದ. ಐದಾರು ದಿನದಿಂದ 45 ಡಿಗ್ರಿ ಉಷ್ಣಾಂಶವಿದ್ದ ಪ್ರದೇಶ ಈಗ 39 ಡಿಗ್ರಿಗೆ ಇಳಿದಿದೆ. ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ ಎಂದು ರೈತ ದ್ಯಾವಪ್ಪ ಹೇಳಿದರು.

ಆದರೆ ಅಕಾಲಿಕ ಮಳೆಯು ಮಾವು ಬೆಳೆ ನಷ್ಟ ಅನುಭವಿಸುವಂತೆ ಆಗಿದೆ. ಜೋರಾದ ಗಾಳಿಯ ಹೊಡೆತಕ್ಕೆ ಮಾವಿನ ಕಾಯಿ ನೆಲಕ್ಕೆ ಅಪ್ಪಳಿಸುತ್ತಲಿವೆ. ಇದು ಮಾವು ಬೆಳೆಗಾರರು ನಷ್ಟ ಅನುಭವಿಸುವಂತೆ ಆಗಿದೆ. ಅಲ್ಲದೆ ಏಕಾಏಕಿ ಎರಗುವ ಸಿಡಿಲಿನ ಹೊಡೆತಕ್ಕೆ ರೈತರು ಆತಂಕ ಎದುರಿಸುವಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT