ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ | ಹೆಚ್ಚಾದ ಮಳೆ: ಬೆಳೆಗಳಿಗೆ ರೋಗ ಭೀತಿ

Published : 10 ಸೆಪ್ಟೆಂಬರ್ 2024, 14:16 IST
Last Updated : 10 ಸೆಪ್ಟೆಂಬರ್ 2024, 14:16 IST
ಫಾಲೋ ಮಾಡಿ
Comments

ಕೆಂಭಾವಿ: ಸತತ ಮಳೆಯಿಂದ ಹತ್ತಿ, ತೊಗರಿ ಬೆಳೆಯಲ್ಲಿ ನಿಂತಿರುವ ನೀರು ಇನ್ನೂ ಖಾಲಿಯಾಗದೆ ಇರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಈ ಬಾರಿ ಕೆಂಭಾವಿ ವಲಯದಲ್ಲಿ ಹೆಚ್ಚಾಗಿ ಹತ್ತಿ ಮತ್ತು ತೊಗರಿ ಬೆಳೆಗಳು ಕಂಡು ಬರುತ್ತಿದ್ದು ಸತತ ಮಳೆಯಿಂದ ಈಗಾಗಲೇ ಕೆಲವು ಜಮೀನುಗಳಲ್ಲಿ ನೀರು ನಿಂತು ತೊಗರಿ ಬೆಳೆ ಹಳದಿ ಬಣ್ಣಕ್ಕೆ ತಿರುಗಿದ್ದು ಹತ್ತಿ ಬೆಳೆಗೂ ತಾಮ್ರರೋಗದ ಭೀತಿ ಎದುರಾಗಿದೆ. ಸಾವಿರಾರು ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ಮೊದಲು ಮಳೆ ಕೈಕೊಟ್ಟಿದ್ದರೂ ನಂತರ ಮಳೆ ಬಂದು ರೈತರಲ್ಲಿ ಮಂದಹಾಸ ಮೂಡಿತ್ತು. ಆದರೆ ಕಳೆದ ವಾರ ಸುರಿದ ಎಡೆಬಿಡದ ಮಳೆಯಿಂದ ಪ್ರಮುಖ ಬೆಳೆಗಳಿಗೆ ರೋಗದ ಭೀತಿ ಕಾಡುತ್ತಿದೆ. ಈ ಕುರಿತು ಕೃಷಿ ಅಧಿಕಾರಿಗಳು ರೈತರಿಗೆ ಸಲಹೆ ನೀಡುವುದರ ಜೊತೆಗೆ ಹಾನಿಯಾಗುತ್ತಿರುವ ಬೆಳೆಗಳ ಸಮೀಕ್ಷೆ ಮಾಡುವಂತೆ ರೈತರು ಮನವಿ ಮಾಡಿದ್ದಾರೆ.

‘ನನ್ನ ಐದು ಎಕರೆ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆ ಈಗ ಸಂಪೂರ್ಣ ಮಳೆಯ ನೀರಿನಲ್ಲಿ ನಿಂತಿದೆ. ಎಷ್ಟು ಪ್ರಯತ್ನಪಟ್ಟರೂ ನೀರು ಖಾಲಿಯಾಗದೆ ಇರುವುದು ಚಿಂತೆಯಾಗಿದ್ದು, ಬೆಳೆಗಳಿಗೆ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಹತ್ತಿ ಬೆಳೆಗಾರ ಮುದೆಪ್ಪ ಪೂಜಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT