ಶನಿವಾರ, ಜೂನ್ 25, 2022
24 °C

ಮಕ್ಕಳ ಹೆಸರಿನಲ್ಲಿ ಎಫ್‍ಡಿ ಮಾಡಿಸಿದ ಶಾಸಕ ರಾಜೂಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಇಬ್ಬರು ಮಕ್ಕಳ ಹೆಸರಿನಲ್ಲಿ ತಲಾ ₹ 50 ಸಾವಿರ ಮೊತ್ತವನ್ನು ಬ್ಯಾಂಕ್‍ನಲ್ಲಿ ಫಿಕ್ಸ್ ಡಿಪಾಸಿಟ್ ಮಾಡಿಸಿ ಶಾಸಕ ರಾಜೂಗೌಡ ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನ ದೇವಾಪುರ ಗ್ರಾಮದ ಬಸವರಾಜ ದಾವಣಗೆರೆ ಎಂಬುವರು ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಪತ್ನಿ ಕೂಡ ಎರಡು ವರ್ಷಗಳ ಹಿಂದೆಯೇ ಸಾವನಪ್ಪಿದ್ದರು. ಹೀಗಾಗಿ ತಂದೆ-ತಾಯಿ ಕಳೆದುಕೊಂಡು ಮಕ್ಕಳು ತಬ್ಬಲಿಯಾಗಿದ್ದರು.

ವಿಷಯ ತಿಳಿದ ಶಾಸಕ ರಾಜೂಗೌಡ ಅವರು ದೇವಾಪುರ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಸಾಂತ್ವನ ಹೇಳಿದ್ದರು.

ಇದೇ ವೇಳೆ ತಂದೆ-ತಾಯಿ ಕಳೆದುಕೊಂಡು ಮಕ್ಕಳಿಬ್ಬರ ಹೆಸರಿನಲ್ಲಿ ವೈಯಕ್ತಿಕವಾಗಿ ತಲಾ ₹ 50 ಸಾವಿರ ನೀಡುವುದಾಗಿ ಮತ್ತು ಆ ಹಣವನ್ನು ಮಕ್ಕಳ ಹೆಸರಿನಲ್ಲಿ ಬ್ಯಾಂಕ್‍ನಲ್ಲಿ ಇಡುವುದಾಗಿ ಅಲ್ಲಿದ್ದ ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದ್ದರು.

ಮಾತಿನಂತೆ ರಾಜೂಗೌಡ ಸೇವಾ ಸಮಿತಿಯ ಸದಸ್ಯರನ್ನು ಬುಧವಾರ ದೇವಾಪುರಕ್ಕೆ ಕಳುಹಿಸಿದ ಶಾಸಕ ರಾಜೂಗೌಡ ಅವರು, ಮಕ್ಕಳ ಕುಮಾರಿ ದಿವ್ಯಾ ಮತ್ತು ಕುಮಾರಿ ತೇಜಸ್ವಿನಿ ಹೆಸರಿನಲ್ಲಿ ಅಲ್ಲಿಯ ಪಿಕೆಜಿ ಬ್ಯಾಂಕ್‍ನಲ್ಲಿ ತಲಾ ₹ 50 ಸಾವಿರ ಎಫ್‍ಡಿ ಮಾಡಿಸಿದ್ದಾರೆ.

ನಂತರ ಸೇವಾ ಸಮಿತಿಯವರು ಎಫ್‍ಡಿ ಬಾಂಡ್‍ನ್ನು ಮಕ್ಕಳ ಅಜ್ಜಿಯ ಕೈಯಲ್ಲಿ ಕೊಟ್ಟು ಬಂದಿದ್ದಾರೆ.
ಸಮಿತಿಯ ತಿಗಳಪ್ಪ ಕವಡಿಮಟ್ಟಿ, ಗಂಗಾಧನಾಯಕ ಅರಳಹಳ್ಳಿ, ಪರಶುರಾಮ ನಾಟೇಕರ್, ವಸಂತ ನಾಯಕ ಅರಳಹಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.