ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ: ರಸ್ತೆ ಇಕ್ಕೆಲಗಳಲ್ಲಿ ಸಸಿ ನೆಡಲು ಆಗ್ರಹಿಸಿ ಮನವಿ

Published 22 ಜೂನ್ 2024, 14:48 IST
Last Updated 22 ಜೂನ್ 2024, 14:48 IST
ಅಕ್ಷರ ಗಾತ್ರ

ಸುರಪುರ: ಸಮೀಪದ ಕುಂಬಾರಪೇಟದಿಂದ ಮಂಗಳೂರ ಗ್ರಾಮದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸಸಿ ನೆಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಸಂಸ(ಡಿ.ಜಿ.ಸಾಗರ) ಸದಸ್ಯರು ಅರಣ್ಯ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಇಲ್ಲಿಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ, ‘ಕುಂಬಾರಪೇಟದಿಂದ ಮಂಗಳೂರ 15 ಕಿ.ಮೀ. ದೂರವಿದ್ದು, ಈ ರಸ್ತೆಯ ಇಕ್ಕೆಲಗಳಲ್ಲಿ ಮರಗಳಿರುವುದಿಲ್ಲ’ ಎಂದು ಹೇಳಿದರು.

‘ರಸ್ತೆ ಇಕ್ಕೆಲಗಳಲ್ಲಿ ಗಿಡ ಬೆಳೆಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಹೀಗಾಗಿ ಈ ರಸ್ತೆಯಲ್ಲಿ ಮರಗಳನ್ನು ಬೆಳೆಸುವುದು ಅಗತ್ಯವಾಗಿದೆ. ತಾಪಮಾನ ಕಡಿಮೆಗೊಳಿಸಲು ಗಿಡಗಳನ್ನು ನೆಡಬೇಕು ಎಂದು ಮನವಿ ಮಾಡಿದರು.

ಸಮಿತಿ ತಾಲ್ಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಶೇಖರ ಮಂಗಳೂರ, ರಾಜು ಬಡಿಗೇರ, ಎಂ. ಪಟೇಲ, ಭೀಮರಾಯ ಮಂಗಳೂರ, ಹಣಮಂತ ರತ್ತಾಳ, ಖಾಜಾ ಅಜ್ಮೀರ್, ಯಲ್ಲಪ್ಪ ರತ್ತಾಳ, ಹಣಮಂತ ದೇವಾಪುರ, ಮೌನೇಶ ದೇವತ್ಕಲ, ಮೌನೇಶ ತಿಂಥಣಿ, ದೇವಿಂದ್ರ ವಾಗಣಗೇರ, ಈರಪ್ಪ ಬಡಿಗೇರ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT