ಸುರಪುರ: ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಆರಂಭಿಸುವಂತೆ ಆಗ್ರಹಿಸಿ ದಲಿತ ಸಂಘಟನೆ (ಕ್ರಾಂತಿಕಾರಿ ಬಣ) ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.

ಸಮಿತಿ ಜಿಲ್ಲಾಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಈಗಾಗಲೇ ಸರ್ಕಾರದ ಮಾರ್ಗಸೂಚಿಯಂತೆ ಶಾಲಾ– ಕಾಲೇಜು ಆರಂಭಗೊಂಡಿವೆ. ವಸತಿ ನಿಲಯಗಳ ಆರಂಭ ಮಾಡದ ಕಾರಣ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಊಟ ಮತ್ತು ವಸತಿಗೆ ತೊಂದರೆ ಪಡುವಂತಾಗಿದೆ ಎಂದರು.

ಹತ್ತನೇಮತ್ತು ಪಿಯುಸಿ ಹಾಗೂ ಪದವಿ ಹಂತದ ಶಾಲಾ–ಕಾಲೇಜು ಆರಂಭಗೊಂಡಿವೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭಗೊಂಡಿದೆ. ಈ ಎಲ್ಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೂಡಲೇ ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆ ಬಾಲಕ–ಬಾಲಕಿಯರ ವಸತಿ ನಿಲಯ ಹಾಗೂ ಬಿಸಿಯೂಟ ಕೂಡಲೇಆರಂಭಿಸಲು ಆದೇಶಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ ಅವರಿಗೆ ಸಲ್ಲಿಸಿದರು.

ಸಮಿತಿ ತಾಲ್ಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾತನಾಡಿದರು. ಪ್ರಮುಖರಾದ ಮಾನಪ್ಪ ಬಿಜಾಸ್ಪೂರ, ಮಹೇಶ ಯಾದಗಿರಿ, ಜಟ್ಟೆಪ್ಪ ನಾಗರಾಳ, ಖಾಜಾ ಹುಸೇನ್ ಗುಡುಗುಂಟಿ, ಭೀಮಣ್ಣ ಖ್ಯಾತನಾಳ, ಶೇಖಪ್ಪ ಬಂಡಾರೆ, ಸಣ್ಣ ತಿಪ್ಪಣ್ಣ ಶೆಳ್ಳಗಿ, ಶಿವಪ್ಪ ಎಲಗತ್ತಿ, ನಾಗರಾಜದಿವಳಗುಡ್ಡ, ಹಣಮಂತ ದೊರೆ, ಹುಲಗಪ್ಪ ಶೆಳ್ಳಗಿ, ಪಾರಪ್ಪ ದೇವತ್ಕಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.