ಭಾನುವಾರ, ಸೆಪ್ಟೆಂಬರ್ 27, 2020
27 °C

ಮದುವೆ ಮನೆಯಲ್ಲಿ ಅಸಭ್ಯವರ್ತನೆ: ರೌಡಿಶೀಟರ್ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್ (ಯಾದಗಿರಿ ಜಿಲ್ಲೆ): ಸಂಬಂಧಿಕರ ಮದುವೆ ವೇದಿಕೆಯಲ್ಲಿ ಮದುಮಗಳೊಡನೆ ಅಸಭ್ಯ ವರ್ತನೆ ತೋರಿದಕ್ಕೆ ರೌಡಿಶೀಟರ್ ನನ್ನು ಕೊಲೆ ಮಾಡಿದ ಘಟನೆ ಸೋಮವಾರ ಜರುಗಿದೆ.

ಕೊಲೆಯಾದವನು ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಮಹಮ್ಮದ್ ಹನೀಫ್ (34)  ಎಂದು ಗುರುತಿಸಲಾಗಿದೆ.

ಸೋಮವಾರ ತಾಲ್ಲೂಕಿನ ಪರಮೇಶಪಲ್ಲಿಯ ರಸೂಲ್ ಮಗಳ ಮದುವೆಗೆ ಹೋಗಿದ್ದ ಮಹಮ್ಮದ್ ಹನೀಫ್ ಮದುಮಗಳೊಡನೆ ಅಸಭ್ಯವಾಗಿ ವರ್ತಿಸುತ್ತಿರುವುದಕ್ಕೆ ಬೇಸತ್ತ ರಸೂಲ್ ಹಾಗೂ ಆತನ ಮಕ್ಕಳಾದ ಗುಲಾಮ್, ಇರ್ಫಾನ್ ಹಾಗೂ ಹಾರೂನ್ ಜೊತೆಗೂಡಿ ರೌಡಿಶೀಟರ್‍ ಹನೀಫ್ ನನ್ನು ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.