ಸೈದಾಪುರ: ಚಿತ್ತಾಪುರ, ಗುರುಮಠಕಲ್ನಲ್ಲಿ ಆರ್ಎಸ್ಎಸ್ ಪಥಸಂಚಲನ ವಿವಾದ ನಡುವೆ ಸೈದಾಪುರ ಪಟ್ಟಣದಲ್ಲಿ ಸೋಮವಾರ ಆರ್ಎಸ್ಎಸ್ ಪಥಸಂಚಲನ ಯಶಸ್ವಿಯಾಗಿ ನಡೆಯಿತು.

ಪಟ್ಟಣದಲ್ಲಿ ಆರ್ಎಸ್ಎಸ್ ಶತಾಬ್ದಿ ಹಿನ್ನಲೆ ಗುರುಮಠಕಲ್ ವಿಧಾನಸಭೆ ಕ್ಷೇತ್ರದ ಸೈದಾಪುರನಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆದು, ಸರ್ಕಾರದ ನಿಯಮದಂತೆ ಶಾಂತಿಯುತ ಪಥಸಂಚಲನ ಜರುಗಿತು.

ಪಟ್ಟಣದ ಮಹಾವೀರ ಶಾಲೆಯಿಂದ ಅಂಬಿಗರ ಚೌಡಯ್ಯ, ಹೆಮ್ಮರೆಡ್ಡಿ ಮಲ್ಲಮ್ಮ, ಕನಕದಾಸ, ಬಾಬು ಜಗಜೀವನ ರಾಮ್, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ರೈಲು ನಿಲ್ದಾಣ, ಬಸವೇಶ್ವರ ವೃತ್ತ, ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಮಾರ್ಗದಲ್ಲಿ ಪಥಸಂಚಲನ ನಡೆಯಿತು.

ಪಥ ಸಂಚಲನದಲ್ಲಿ ಮಕ್ಕಳು, ಯುವಕರು ಸೇರಿದಂತೆ ಹಿರಿಯ ನಾಗರಿಕರು ಪಥಸಂಚಲನದಲ್ಲಿ ಭಾಗಿಯಾಗಿದ್ದರು. ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತು.

ಗಣವೇಷಧಾರಿಗಳ ಮೇಲೆ ಪುಷ್ಪಾರ್ಪಣೆ: ಪಟ್ಟಣದ ಬಹುತೇಕ ವ್ಯಾಪರಸ್ಥರು, ಸಾರ್ವಜನಿಕರು ಅಂಗಡಿಗಳ ಮುಂದೆ ನಿಂತು, ಪಥಸಂಚಲನದಲ್ಲಿ ಗಣವೇಷಧಾರಿಗಳಿಗೆ ಪುಷ್ಪ ಮಳೆಗೈದರು.

ಮಹಿಳೆಯರು ರಸ್ತೆ ಉದ್ದಗಲಕ್ಕೂ ರಂಗೋಲಿ ಚಿತ್ತಾರ ಬಿಡಿಸಿದ್ದರು. ದೇಶಭಕ್ತರ ಭಾವಚಿತ್ರವಿಟ್ಟು ಸ್ವಯಂ ಸೇವಕರಿಗೆ ಅದ್ಧೂರಿ ಸ್ವಾಗತ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.