ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗತ್ತಿನ ಬದಲಾವಣೆಗೆ ವಿಜ್ಞಾನ ವಿನ್ಯಾಸ :ಮಲ್ಹಾರ

Published 29 ಫೆಬ್ರುವರಿ 2024, 13:07 IST
Last Updated 29 ಫೆಬ್ರುವರಿ 2024, 13:07 IST
ಅಕ್ಷರ ಗಾತ್ರ

ಸೈದಾಪುರ: ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪ್ರಗತಿಗಳನ್ನು ವಿನ್ಯಾಸಗೊಳಿಸುವುದು ವಿಜ್ಞಾನ ಎಂದು ಸಮಾಜ ವಿಜ್ಞಾನ ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಸರ್. ಸಿವಿ. ರಾಮನ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಕ್ಕಳಲ್ಲಿ ವೈಚಾರಿಕ ಮನೋಭಾವನೆ ಬೆಳೆಸಿಕೊಳ್ಳಲು ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

‘ವಿಜ್ಞಾನ ಕಾರ್ಯಾಗಾರಗಳು, ವಸ್ತು ಪ್ರದರ್ಶನಗಳು ಮತ್ತು ವಿಜ್ಞಾನ ಮೇಳಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಸಂವೇದನಾತ್ಮಕ ಮತ್ತು ಮೋಜಿನ ರೀತಿಯಲ್ಲಿ ವಿಜ್ಞಾನಕ್ಕೆ ಪ್ರೇರೇಪಿಸಬೇಕು ಎಂದರು.

ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್, ಭೀಮಣ್ಣ, ಆನಂದ ಪಾಟೀಲ ಕೊಂಡಾಪುರ ಸೇರಿದಂತೆ ಇತರರಿದ್ದರು.

ಚಿತ್ರಶೀರ್ಷಿಕೆ:28ಎಸ್‍ಡಿಪಿಆರ್1:ಅಂಗವಾಗಿ ಮಕ್ಕಳಲ್ಲಿ ವೈಚಾರಿಕೆ ಮನೋಭಾವನೆ ಬೆಳಸಿಕೊಳ್ಳಲು ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮುಖ್ಯಗುರು ಲಿಂಗಾರೆಡ್ಡಿ ನಾಯಕ, ವಿಜ್ಞಾನ ಶಿಕ್ಷಕ ರಾಚಯ್ಯಸ್ವಾಮಿ ಬಾಡಿಯಾಲ ಸೇರಿದಂತೆ ಇತರರಿದ್ದರು.

ಚಿತ್ರಶೀರ್ಷಿಕೆ:28ಎಸ್‍ಡಿಪಿಆರ್1: ಸೈದಾಪುರ ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ವೈಚಾರಿಕೆ ಮನೋಭಾವನೆ ಬೆಳಸಿಕೊಳ್ಳಲು ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮುಖ್ಯಗುರು ಲಿಂಗಾರೆಡ್ಡಿ ನಾಯಕ ವಿಜ್ಞಾನ ಶಿಕ್ಷಕ ರಾಚಯ್ಯಸ್ವಾಮಿ ಬಾಡಿಯಾಲ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT