ಶಹಾಪುರ: ಸಂಸ್ಕೃತ ಬಹುಕಾಲದ ಹಿಂದೆ ಆಡಳಿತ ಭಾಷೆ ಆಗಿತ್ತು. ಆದರೆ ಕ್ರಮೇಣ ಅನ್ಯ ಭಾಷೆಗಳ ಆಡಳಿತದಿಂದ ಸಂಸ್ಕೃತ ಭಾಷೆ ಮೌಲ್ಯ ಕುಸಿಯುತ್ತ ಬಂತು. ಸಂಸ್ಕೃತ ಎನ್ನುವ ಭಾಷೆ ಶ್ರೀಮಂತರ ಹಾಗೂ ಉನ್ನತ ವರ್ಗದವರ ಭಾಷೆಯಾಗಿತ್ತು. ರಾಷ್ಟ್ರಕೂಟರು, ಕದಂಬರು ಹಾಗೂ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಸ್ಕೃತ ಭಾಷೆಗೆ ಹೆಚ್ಚಿನ ಮನ್ನಣೆ ಇತ್ತು. ಸಂಸ್ಕೃತ ಭಾಷೆ ತುಂಬಾ ಪುರಾತನವಾದ ಮಹತ್ವದ ಭಾಷೆಯಾಗಿದೆ ಎಂದು ಚರಬಸವೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ತಿಪ್ಪಣ್ಣ ಜಮಾದಾರ ತಿಳಿಸಿದರು.
ನಗರದ ಚರಬಸವೇಶ್ವರ ಸಂಸ್ಕೃತ ಪಾಠಶಾಲೆ ಹಾಗೂಚರಬಸವೇಶ್ವರ ಪ್ರೌಢಶಾಲೆ ಮತ್ತು ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜರುಗಿದ ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮದಲ್ಲಿ ಅವರು ಮಾತನಾತನಾಡಿದರು.
ಶಿಕ್ಷಕ ಶರಣಯ್ಯಸ್ವಾಮಿ ಹಿರೇಮಠ ಮಾತನಾಡಿ ಸಂಸ್ಕೃತ ಒಂದು ದೈವ ಭಾಷೆ ಆರ್ಯವೇದ ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಬೇಕಾದರೆ ಸಂಸ್ಕೃತ ಓದಲೇ ಬೇಕಾಗುತ್ತದೆ. ಈ ಭಾಷೆಯನ್ನು ಪ್ರತಿಯೊಬ್ಬರು ಕಲಿಯಲು ಆಸಕ್ತಿ ತೋರಬೇಕು ಎಂದರು.