ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ’

Last Updated 4 ಜನವರಿ 2022, 6:32 IST
ಅಕ್ಷರ ಗಾತ್ರ

ಹುಣಸಗಿ: ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ ಮಹಾನ್ ಸಾಧಕಿ ಎಂದು ಪ್ರಾಚಾರ್ಯ ಎಸ್.ಎಂ.ಕಿರಣಗಿ ಹೇಳಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯ ಹಾಗೂ ವಿ.ಎಸ್.ಪಿ.ಎಂ ಐಟಿಐ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾತ್ಮ ಜ್ಯೋತಿಬಾ ಫುಲೆ ಅವರ ಸಹಕಾರದಿಂದ ಎಲ್ಲ ಸವಾಲುಗಳನ್ನು ಸಂಯಮದಿಂದಲೇ ಎದುರಿಸಿ ಹಿಂದುಳಿದವರು ಹಾಗೂ ಮಹಿಳೆಯರಿಗಾಗಿಯೆ ಶಾಲೆಗಳನ್ನು ಆರಂಭಿಸಿ ಅಕ್ಷರದ ಜ್ಯೋತಿ ಬೆಳಗಿಸಿದ ಅವ್ವ ಸಾವಿತ್ರಿಬಾಯಿ ಎಂದು ಬಣ್ಣಿಸಿದರು.

ಉಪನ್ಯಾಸಕರಾದ ಬಸವರಾಜ ತಳ್ಳಳ್ಳಿ ಹಾಗೂ ನಿಂಗುನಾಯಕ ಮಾತನಾಡಿ, ಮಹಿಳಾ ಶಿಕ್ಷಣದಿಂದಾಗುವ ಪ್ರಯೊಜನಗಳು ಕುರಿತು ಅಂದೇ ಅರಿತಿದ್ದ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಕ್ರಾಂತಿಯನ್ನೇ ಕೈಗೊಂಡರು. ತಮಗಾದ ಎಲ್ಲ ಅವಮಾನಗಳನ್ನು ಸಹಿಸಿಕೊಂಡು ಮಹಿಳಾ ಅಭಿವೃದ್ಧಿಗೆ ಆದ್ಯತೆ ನೀಡಿದರು. ಸತಿ ಸಹಗಮನ, ಬಾಲ್ಯ ವಿಹಾಹ ಮತ್ತಿತರ ಸಾಮಾಜಿಕ ಪಿಡುಗಳ ಕುರಿತು ಹೊರಾಟ ಮಾಡಿದ್ದಾರೆ ಎಂದು ಹೇಳಿದರು.

ಉಪನ್ಯಾಸಕರಾದ ಬಸವರಾಜ ಜಾಧವ, ಪದ್ಮಾವತಿ ಮಾತನಾಡಿದರು. ಐಟಿಐ ಕಾಲೇಜು ಪ್ರಾಚಾರ್ಯ ಬಸವರಾಜ ಮರೋಳ, ಭೀಮಶೇನರಾವ ಕುಲಕರ್ಣಿ, ಕೆ.ಜಿ.ದೇಶಪಾಂಡೆ ಸೇರಿದಂತೆ ಇತರರು ಇದ್ದರು.

ಶರೀಫ್ ಸ್ವಾಗತಿಸಿದರು. ಸಾಯಿ ಪಟೇಲ ನಿರೂಪಿಸಿದರು. ರಿಯಾನಬಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT