ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ | ಮಳೆಗೆ ಸೋರುತ್ತಿದೆ ಶಾಲೆಯ ಕೊಠಡಿಗಳು

Published 31 ಜುಲೈ 2023, 13:51 IST
Last Updated 31 ಜುಲೈ 2023, 13:51 IST
ಅಕ್ಷರ ಗಾತ್ರ

ಯರಗೋಳ: ಸಮೀಪದ ಕಂಚಗಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳು ಶಿಥಿಲಗೊಂಡು ಸೋರುತ್ತಿವೆ.

ಮಳೆಯಿಂದಾಗಿ ಚಾವಣಿಯ ಸಿಮೆಂಟ್ ಪದರು ಕಿತ್ತು ಬಂದಿದೆ. ಅಪಾಯದ ಮುನ್ನಚ್ಚರಿಕೆ ಕ್ರಮವಾಗಿ ಸೋಮವಾರ ಶಿಕ್ಷಕರು ವಿದ್ಯಾರ್ಥಿಗಳನ್ನು ಬಯಲು ಪ್ರದೇಶದಲ್ಲಿ ಕೂರಿಸಿ ಪಾಠ ಬೋಧನೆಯಲ್ಲಿ ತೊಡಗಿದ್ದಾರೆ.

ಶಾಲೆಯಲ್ಲಿ 9 ತರಗತಿ ಕೋಣೆಗಳಿದ್ದು, 6 ಕೋಣೆಗಳು ಉತ್ತಮವಾಗಿವೆ. 1 ರಿಂದ 8 ನೇ ತರಗತಿಯ 203 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ ಎಂದು ಶಾಲೆಯ ಸಮೂಹ ಸಂಪನ್ಮೂಲ ವ್ಯಕ್ತಿ ಬಂಗಾರಪ್ಪ ಕುಂಬಾರ್ 'ಪ್ರಜಾವಾಣಿ' ಗೆ ತಿಳಿಸಿದರು

'ಸಂಬಂದಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕರು, ಶಾಲಾ ಕೋಣೆಗಳ ದುರಸ್ತಿಯ ಬಗ್ಗೆ ಗಮನಹರಿಸಬೇಕು. ಶಿಥಿಲವಾದ 3 ಕೋಣೆಗಳನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡಿ, ಮಕ್ಕಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥ ಚಂದ್ರಕಾಂತ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT