ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ | ರಸ್ತೆ ಮೇಲೆ ಚರಂಡಿ ನೀರು: ಬಡಾವಣೆ ಜನರಿಗೆ ತೊಂದರೆ

Published 24 ಮೇ 2024, 13:55 IST
Last Updated 24 ಮೇ 2024, 13:55 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣದ ವಾರ್ಡ ನಂ.11 ರ ಮುಖ್ಯರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ವಾರ್ಡ್‌ ನಿವಾಸಿ ಅಯ್ಯಪ್ಪಸ್ವಾಮಿ ಹೊಸಮನಿ ಆಗ್ರಹಿಸಿದ್ದಾರೆ.

‘ಈ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವದೇ ಪ್ರಯೋಜನವಾಗಿಲ್ಲ. ಇದು ಈ ವಾರ್ಡಿನ ಮುಖ್ಯರಸ್ತೆಯಾಗಿದ್ದು ಹಳೆ ಬಸ್ ಸ್ಟ್ಯಾಂಡ್ ಹಾಗೂ ಮುಖ್ಯ ಬಾಜಾರಕ್ಕೆ ಕೊಂಡಿಯಂತಿದೆ. ಈ ರಸ್ತೆ ಮೂಲಕ ನೂರಾರು ವಾಹನಗಳು ತಿರುಗಾಡುತ್ತವೆ. ವೃದ್ಧರು, ಮಹಿಳೆಯರು, ಮಕ್ಕಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಯಾರಿಗಾದರೂ ಹೆಚ್ಚು ಕಡಿಮೆಯಾದರೆ ಪುರಸಭೆ ಅಧಿಕಾರಿಗಳೆ ನೇರ ಹೊಣೆಗಾರರು. ಚರಂಡಿ ನೀರು ರಸ್ತೆ ಮೇಲೆ ನಿಂತರೆ ಸಾಂಕ್ರಾಮಿಕ ರೋಗ ಹರಡುವ ಸಂಭವ ಜಾಸ್ತಿ. ಮಕ್ಕಳ ಹಾಗೂ ವೃದ್ಧರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪುರಸಭೆ ಮುಖ್ಯಾಧಿಕಾರಿಗಳು ಈ ಕುರಿತು ಮುತುವರ್ಜಿ ವಹಿಸಿ ರಸ್ತೆ ಮೇಲೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT