ಶಹಾಪುರ: ನಗರದ ಪೊಲೀಸ್ ಠಾಣೆಯು ಆಧುನಿಕತೆಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿದೆ. ಯಾವುದೇ ಕೃತ್ಯ ನಡೆದರೆ ನಿಖರವಾಗಿ ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾ ಹೆಚ್ಚಿನ ಬಲ ನೀಡಿದೆ.

ನಗರದಲ್ಲಿ ಹಲವಾರು ಕಳ್ಳತನ, ವಾಹನ ಅಪಘಾತದಲ್ಲಿ ಹಿಟ್ ಅಂಟ್ ರನ್ ( ವಾಹನಕ್ಕೆ ಗುದ್ದಿ ಓಡುವುದು) ಪ್ರಕರಣ ಭೇದಿಸಲು ನೆರವಾಗಿವೆ. ಅಪರಾಧ ಎಸಗುವ ಮುನ್ನ ಹುಷಾರ್ ಎನ್ನುವಂತೆ ಪೊಲೀಸ್ ಇಲಾಖೆಯಿಂದ ಕೇಳಿ ಬರುತ್ತಲಿದೆ.

ನಗರಸಭೆಯ ಸುಮಾರು ₹ 7 ಲಕ್ಷ ಅನುದಾನದಲ್ಲಿ ನಗರದ ಪ್ರಮುಖ ಸ್ಥಳಗಳಾದ ಹೊಸ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ, ದಿಗ್ಗಿ ಬೇಸ್ ಸೇರಿ 16 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ.

‘ರಾತ್ರಿ ಹಾಗೂ ಹಗಲು ಸಮಯದಲ್ಲಿ ಅಪರಾಧ ಕೃತ್ಯ ಎಸಗಿ ಪರಾರಿಯಾಗಿದ್ದರೆ ಇಲ್ಲವೆ ಕಳವು ಮಾಡಿದ್ದರೆ, ಸಂಶಯಾಸ್ಪವಾಗಿ ಓಡಾಡುತ್ತಿದ್ದರೆ ಅನುಮಾನಗೊಂಡ ವ್ಯಕ್ತಿಯನ್ನು ಕರೆ ತಂದು ವಿಚಾರಣೆ ಮಾಡಲು ಸಹಕಾರಿಯಾಗುತ್ತದೆ. ಅಲ್ಲದೆ ಅಪರಾಥ ಪತ್ತೆಗೆ ತುಂಬಾ ನಿಖರತೆ ಒದಗಿಸುತ್ತದೆ’ ಎನ್ನುತ್ತಾರೆ ಶಹಾಪುರ ಠಾಣೆಯ ಪಿ.ಐ ಎಸ್.ಎಂ. ಪಾಟೀಲ.

ಬೀದರ್-ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಮೇಲಿರುವ ತಾಲ್ಲೂಕಿನ ಹತ್ತಿಗೂಡೂರ ಗ್ರಾಮ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ದುರಸ್ತಿಗೊಳಿಸಿದೆ. ಇದು ಹೆದ್ದಾರಿ ಮೇಲೆ ನಡೆಯುವ ರಸ್ತೆ ಅಪಘಾತ ಪ್ರಕರಣ ಭೇದಿಸಲು ನೆರವಾಗಲಿದೆ.

ಸಾರ್ವಜನಿಕರು ಸಹ ಪೊಲೀಸ್ ಸಿಬ್ಬಂದಿಗೆ ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಸಿಸಿಟಿವಿ ಕ್ಯಾಮೆರಾ ಹಾಳು ಮಾಡಬಾರದು. ನಮ್ಮ ಸಂರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಸಲುವಾಗಿ ಅಳವಡಿಸಿದ್ದು ಇರುತ್ತದೆ ಎಂಬುವುದು ಮರೆಯಬೇಡಿ’ ಎಂದು ಅವರು ತಿಳಿಸಿದ್ದಾರೆ.

ನಗರಸಭೆಯ ಅನುದಾನದ ಅಡಿಯಲ್ಲಿ ಅಪರಾಧ ಪತ್ತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ. ಇದು ಅಪರಾಧ ಕೃತ್ಯದ ವಿಚಾರಣೆಗೆ ಹೆಚ್ಚು ಸಹಕಾರಿಯಾಗಿದೆ.
-ಎಸ್.ಎನ್. ಪಾಟೀಲ, ಪಿ.ಐ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.