ಶಹಾಪುರ: ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಸಿಪಿಐ(ಎಂ) ಪಕ್ಷದ ರಾಜಕೀಯ ಸಮಾವೇಶ ನಡೆಯಿತು.

ಈ ವೇಳೆ ಭಾಗವಹಿಸಿದ್ದ ಮುಖಂಡರು,‘ಜಿಲ್ಲೆಯಲ್ಲಿ ಶಿಕ್ಷಣದಲ್ಲಿ ಹಿಂದುಳಿಕೆಗೆ ಕಾರಣವಾದ ಶಿಕ್ಷಕರ ಕೊರತೆಯನ್ನು ನೀಗಿಸಲು ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ನೇಮಿಸಬೇಕು. ರೈತರ ಆತ್ಮಹತ್ಯೆ ತಡೆಯಲು ಋಣಮುಕ್ತ ಕಾಯ್ದೆ ಜಾರಿ ಮಾಡಿ ಸಂಪೂರ್ಣ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

‘ರೈತರು ಬೆಳೆದ ಬೆಳೆಗಳಾದ ಹತ್ತಿ, ಮೆಣಸಿನಕಾಯಿ, ತೊಗರಿ, ಭತ್ತ, ಶೇಂಗಾ, ಸಜ್ಜೆ ಬೆಳೆಗೆ ವೈಜ್ಞಾನಿಕವಾದ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದ ಸೂರು ವಂಚಿತ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ನೀಡುವುದರ ಜತೆಯಲ್ಲಿ ಪುಕ್ಕಟೆಯಾಗಿ ಸಾಲ ಸೌಲಭ್ಯ ಒದಗಿಸಬೇಕು. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಸಿಪಿಐ(ಎಂ) ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಚೆನ್ನಪ್ಪ ಆನೇಗುಂದಿ ಹಾಗೂ ಪಕ್ಷದ ಮುಖಂಡರಾದ ಮೀನಾಕ್ಷಿ ಬಾಳೆ, ದಾವಲಸಾಬ್ ನದಾಫ್, ಜೈಲಾಲ ತೋಟದಮನೆ, ಎಸ್.ಎಂ.ಸಾಗರ, ಬಸವರಾಜ ದೊರೆ, ಭೀಮರಾಯ ಪೂಜಾರಿ, ಅನಿತಾ ಹಿರೇಮಠ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.