ಶಹಾಪುರ: ‘ಅನುಭವಕ್ಕೆ ಸಿಕ್ಕ ವಸ್ತು ಹಾಗೂ ಅನುಭವಿಸಿದ ನೋವಿನ ಸಂಕಟ, ತಲ್ಲಣಗಳನ್ನು ಅಕ್ಷರದ ರೂಪದಲ್ಲಿ ಇಳಿಸುವುದೆ ಕಾವ್ಯ. ಪ್ರವಾಹದ ವಿರುದ್ಧವಾಗಿ ಚಲಿಸಿದಾಗ ಕಾವ್ಯ ಹೆಚ್ಚು ದಿನ ಉಳಿದುಬಲ್ಲದು. ಕಾವ್ಯ ನಮ್ಮ ವ್ಯಕ್ತಿತ್ವದ ಭಾಗವಾಗಬೇಕು. ಕಾವ್ಯ ಅಕ್ಷರದ ವ್ಯಾಪಾರವಾಗಬಾರದು ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಕ್ರಮ ವಿಸಾಜಿ ಹೇಳಿದರು.

ತಾಲ್ಲೂಕಿನ ಸೈದಾಪುರ ಗ್ರಾಮದ ಯುನೈಟೆಡ್ ಪಬ್ಲಿಕ್ ಶಾಲೆಯ ಆವರಣದಲ್ಲಿ ತಾಲ್ಲೂಕು ಕಸಾಪ ಮತ್ತು ಭೀಮರಾಯನಗುಡಿ ಕಸಾಪ ವಲಯದ ಸಹಯೋಗದಲ್ಲಿ ಭಾನುವಾರ ನಡೆದ ಕಾವ್ಯ ಕಟ್ಟುವ ಬಗೆ ಉಪನ್ಯಾಸ ನೀಡಿದರು.

‘ಕಾವ್ಯ ನಮ್ಮ ಪ್ರಾಮಾಣಿಕತೆಗೆ ಹಿಡಿದ ಕೈನ್ನಡಿಯಂತೆ ಆಗಬೇಕು. ಇದಕ್ಕೆ ನಿರಂತರ ಓದು ಅಗತ್ಯ. ಆಡಂಬರವಿಲ್ಲದೆ ಅನಗತ್ಯ ಪದಗಳನ್ನು ಬಳಸದೆ ಜಾಣ್ಮೆಯಿಂದ ಸದ್ಭಳಕೆ ಮಾಡಿಕೊಳ್ಳಬೇಕು. ಕಾವ್ಯ ಯಾವಾಗೂ ಊಹೆ ಮಾಡಿಕೊಂಡು ವಿಭಿನ್ನ ರೀತಿಯಲ್ಲಿ ಕಾವ್ಯ ರಚನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಹೊಸ ತಲೆಮಾರಿನ ಕಾವ್ಯ ರಚನೆಯ ಸವಾಲು-ಸಾಧ್ಯತೆ ಹಾಗೂ ಸೂಫಿ ಸಂತರ ಬಗ್ಗೆ ರಿಯಾಜ್ ಅಹ್ಮದ್ ಬೋಡೆ ಹಾಗೂ ಉಪನ್ಯಾಸಕ ಗೋವಿಂದರಾಜ ಆಲ್ದಾಳ ಮಾತನಾಡಿದರು.

ಹಳೆಗನ್ನಡ-ನಡುಗನ್ನಡ ಕಾವ್ಯ ಸಂವಾದ ಕುರಿತು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ಡಿ ರಾಜಣ್ಣ ಹಾಗೂ ನಿವೃತ್ತ ಪ್ರಾಚಾರ್ಯ ಅಬ್ದುಲ್ ಕರೀಂ ಕನ್ಯಾಕೊಳ್ಳುರ ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ದೇವಿಂದ್ರಪ್ಪ ಹಡಪದ, ಶರಣಬಸಪ ಪೊಲೀಸ್ ಬಿರಾದಾರ, ಸಾಯಿಬಣ್ಣ ಪುರ್ಲೆ, ಸುರೇಶ ಅರುಣಿ, ರಾಘವೇಂದ್ರ ಹಾರಣಗೇರಾ, ಶಂಕರ ಹುಲಕಲ್, ನಿರ್ಮಲಾ ತುಂಬಿಗಿ,ತಿಪ್ಪಣ ಕ್ಯಾತನಾಳ, ನಾರಾಯಣಚಾರ್ಯ ಸಗರ, ಟಿ.ನಾಗೇಂದ್ರ, ಅಶೋಕ ಚೌದರಿ, ಸಾಯಿಬಣ್ಣ ಮುಡಬೂಳ, ಸಾಯಿಬಾಬಾ ಅಣಬಿ, ನಾಗರಾಜ ದೊರೆ, ಅಂಬ್ಲಯ್ಯ ಸೈದಾಪುರ ಭಾಗವಹಿಸಿದ್ದರು.

ನಂತರ ಎರಡು ದಿನ ನಡೆದ ಕಾವ್ಯ ಕಮ್ಮಟ ಸಂಪನ್ನಗೊಂಡಿತು.

ಯುವ ಸಮುದಾಯಕ್ಕೆ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿ ಅವರಲ್ಲಿ ಅಡಗಿದ ಪ್ರತಿಭೆಯನ್ನು ಹೊರ ಹಾಕುವ ಉದ್ದೇಶದಿಂದ ಕಾವ್ಯ ಕಮ್ಮಟ ಹಮ್ಮಿಕೊಂಡಿದೆ
ಅಪ್ಪುಗೆರೆ ಸೋಮಶೇಖರ ಕಮ್ಮಟದ ನಿರ್ದೇಶಕ

ಕಾವ್ಯ ಕಮ್ಮಟದ ನಿರ್ಣಯಗಳು

ಹಳೆ ಹಾಗೂ ನಡುಗನ್ನಡವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ಸಗರನಾಡಿನ ಸೂಫಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ ಪುನರುಜ್ಜೀವನಗೊಳಿಸಬೇಕು. ಪ್ರತಿ ವರ್ಷ ಸರ್ಕಾರದವತಿಯಿಂದ ತತ್ವಪದ ಹಾಗೂ ಸೂಫಿಸಾಹಿತ್ಯ ಸಮ್ಮೇಳನ ನಡಸಬೇಕು. ಸೂಫಿ ಸಂತರ ಅಪ್ರಕಟಿತ ಕೃತಿ ಸಂಗ್ರಹಿಸಿ ಪ್ರಕಟಿಸಬೇಕು ಎಂಬ ನಿರ್ಣಯಗಳನ್ನು ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಹೊಸಮನಿ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.