ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರವಾಳ: 5 ವರ್ಷವಾದರೂ ಉದ್ಘಾಟನೆಗೊಳ್ಳದ ಮಹಿಳಾ ಶೌಚಾಲಯ

Last Updated 26 ಫೆಬ್ರುವರಿ 2021, 3:05 IST
ಅಕ್ಷರ ಗಾತ್ರ

ಶಿರವಾಳ(ಶಹಾಪುರ): ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ₹7ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮಹಿಳಾ ಶೌಚಾಲಯ ಉಯೋಗಕ್ಕೆ ಬಾರದಾಗಿದೆ. ಕಟ್ಟಡ ನಿರ್ಮಿಸಿ ಬೀಗ ಹಾಕಿದ್ದೆ ಸಾಧನೆಯಾಗಿದೆ ಎಂದು ಅಲ್ಲಿನ ನಿವಾಸಿಗಳುಆರೋಪಿಸಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದ 2015-16 ಸಾಲಿನ ಅಡಿಯಲ್ಲಿ ₹7 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯವನ್ನು ನಿರ್ಮಿತಿ ಕೇಂದ್ರವು ಕಾಮಗಾರಿ ಕೈಗೆತ್ತಿಕೊಂಡು 2016 ಸೆ.5ರಂದು ಕೆಲಸ ಪೂರ್ಣಗೊಳಿಸಿ ನಂತರ ಅದನ್ನು ಗ್ರಾಮ ಪಂಚಾಯಿತಿ ಹಸ್ತಾಂತರ ಮಾಡಿಲ್ಲ. ಅಲ್ಲದೆ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲ. ಸರಿಯಾದ ಪೈಪ್‌ಗಳನ್ನು ಅಳವಡಿಸಿಲ್ಲ. ಅರೆ ಬರೆ ಕೆಲಸ ನಿರ್ವಹಿಸಿದ್ದಾರೆ. ಶೌಚಾಲಯಕ್ಕೆ ಹಾಕಿದ ನಾಮಫಲಕವನ್ನು ಸಹ ಅಳಿಸಿ ಹಾಕಿದ್ದಾರೆ ಎಂದು ಬಡಾವಣೆಯ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ಶೌಚಾಲಯ ಇಲ್ಲದ ಕಾರಣ ಮಹಿಳೆಯರು ರಾತ್ರಿ ಮತ್ತು ಬೆಳಿಗ್ಗೆ ಸೂರ್ಯೋದಯ ಮುಂಚೆಯೇ ಹೊರಬರುವಂತಾಗಿದೆ. ಕೂಡಲೇ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಿ ಸಣ್ಣಪುಟ್ಟ ಕೆಲಸವನ್ನು ದುರಸ್ತಿಗೊಳಿಸಿ ಮಹಿಳೆಯರಿಗೆ ಉಪಯೋಗಿಸಲು ಅನುವು ಮಾಡಿಕೊಡಬೇಕು ಎಂದು ದಲಿತ ಸಂಘಟನೆಯ ಮುಖಂಡ ಶರಣುರಡ್ಡಿ ಹತ್ತಿಗುಡೂರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT