ನಗರದಲ್ಲಿ ವಿವಿಧೆಡೆ ಹಲೀಂ ಘಮ ಸೆಳೆಯುತ್ತಿದೆ. ಇಫ್ತಾರ್ ವೇಳೆ ಗ್ರಾಹಕರು ಬಂದು ಸೇವನೆ ಮಾಡುತ್ತಿದ್ದಾರೆ. ಪಾರ್ಸೆಲ್ ಕೂಡ ಹೆಚ್ಚಾಗಿದೆ
ಮಹಮ್ಮದ್ ಆಜಮ ಉಸ್ತಾದ್ ವ್ಯಾಪಾರಿ
ನಗರದಲ್ಲಿ ರಂಜಾನ್ ಮಾಸದ ಆರಂಭದಿಂದಲೂ ಹಲೀಂ ತಯಾರಿಕೆ ಮಾಡುತ್ತಿದ್ದು ಕಳೆದ ವರ್ಷ ಒಂದು ಪ್ಲೇಟ್‌ಗೆ ₹50 ಇತ್ತು. ಈ ವರ್ಷ ₹20 ಹೆಚ್ಚಿಸಲಾಗಿದೆ
ಬಶೀರ್ ಉಲ್ ಹಸನ್ ಗ್ರಾಹಕ
ಟೆಂಟ್ ಹಾಕಿ ಮಾರಾಟ
ನಗರದ ವಿವಿಧೆಡೆ ಹಲೀಂ ತಯಾರಿಸಿ ಟೆಂಟ್ ಹಾಕಿ ಮಾರಾಟ ಮಾಡಲಾಗುತ್ತಿದೆ. ಪ್ರಮುಖ ವೃತ್ತ ಮತ್ತು ರಸ್ತೆಯ ಮುಂಭಾಗದಲ್ಲಿಯೇ ಹಲೀಂ ತಯಾರಿಸುವುದರಿಂದ ಗ್ರಾಹಕರ ಕಣ್ಣಿಗೆ ಕಾಣಿಸುತ್ತಿದೆ. ಮುಂದಿನ ವಾರದಲ್ಲಿ ರಂಜಾನ್ ಹಬ್ಬ ಇರುವುದರಿಂದ ಅಲ್ಲಿಯತನಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ನಂತರ ಮುಚ್ಚಲಾಗುತ್ತದೆ. ತೆಲಂಗಾಣದ ಹಲೀಂ: ನೆರೆಯ ರಾಜ್ಯ ತೆಲಂಗಾಣದ ಹೈದರಾಬಾದ್ ನಾರಾಯಣಪೇಟದಿಂದ ಹಲೀಂ ತಯಾರಿಕೆಗಾಗಿ ಇಲ್ಲಿ ಬರುತ್ತಾರೆ. ಅಲ್ಲದೇ ನಾರಾಯಣಪೇಟದಿಂದ ಕೆಲ ಪ್ರಸಿದ್ಧ ಹೋಟೆಲ್‌ನಿಂದ ಮಟನ್ ಚಿಕನ್ ಹಲೀಂ ಪಾರ್ಸೆಲ್ ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ಪ್ಲೇಟ್ ಹಲೀಂಗೆ ₹70 ದರ ನಿಗದಿ ಪಡಿಸಲಾಗಿದೆ. ಇದರ ಜೊತೆಗೆ ಖದ್ದುಕೀ ಖೀರು ಸಮೋಸ ಈರುಳ್ಳಿ ಭಜ್ಜಿ ದಹಿ ವಡ ಇನ್ನಿತರ ಪದಾರ್ಥ ಮಾರಾಟ ಮಾಡಲಾಗುತ್ತಿದೆ.