ಶಹಾಪುರ: ರಾಷ್ಟ್ರದಲ್ಲಿಯೇ ಎರಡನೇಯ ಮುಳುಗು ಸೇತುವೆ (ಸಬ್ ಮರ್ಸಿಬಲ್) ಎಂದು ಕರೆಯುವ ತಾಲ್ಲೂಕಿನ ಕೊಳ್ಳೂರ(ಎಂ) ಸೇತುವೆಯನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದು, ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿಯ ರಸ್ತೆ ಸಂಚಾರದ ಪ್ರಮುಖ ಕೊಂಡಿಯಾಗಿದೆ. ಆದರೆ, ಸೇತುವೆ ಹಲವು ಕೌತುಕಗಳನ್ನು ಒಡಲಿನಲ್ಲಿ ತುಂಬಿಕೊಂಡಿದೆ.

ಸೇತುವೆ ಒಳಗಡೆ ಮತ್ತು ಎರಡು ಬದಿಯಲ್ಲಿ ಕೊಳವೆಗಳನ್ನು ಹಾಕಲಾಗಿದೆ. ಮಧ್ಯದಲ್ಲಿ ವಾಹನಗಳ ಭಾರ ತಡೆಯಲು ಸ್ಪ್ರಿಂಗ್ ಹಾಕಿದೆ. ಅಲ್ಲಲಿ ಸೇತುವೆ ಮೇಲೆ ಮುಚ್ಚಳಗಳನ್ನು ಅಳವಡಿಸಿದೆ. ಪ್ರತಿ ವರ್ಷ ಅವುಗಳ ಮುಖಾಂತರ ಒಳಗಡೆ ಇಳಿದು ಸ್ವಚ್ಛಗೊಳಿಸಿ ಅಗತ್ಯ ಎಣ್ಣೆ ಸವರುತ್ತಾರೆ.

ಸಾಮಾನ್ಯವಾಗಿ ಸೇತುವೆ ರಸ್ತೆಯಿಂದ ಎತ್ತರದಲ್ಲಿ ಇರುತ್ತವೆ. ಆದರೆ, ಈ ಸೇತುವೆ ರಸ್ತೆಯಿಂದ ಕೆಳಗಡೆ ಇದೆ. ಕೃಷ್ಣಾ ನದಿಗೆ ಆಗಿನ ಮುಖ್ಯ ಎಂಜಿನಿಯರ್ ಬಸಣ್ಣ ಮರಕಲ್ ಅವರು ತಮ್ಮ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಲು ಸೇತುವೆ ನಿರ್ಮಿಸಿದರು.

ಗ್ಯಾಮನ್ ಇಂಡಿಯಾ ಕಂಪನಿಯು 1975ರಲ್ಲಿ ನಾರಾಯಣಪುರ ಜಲಾಶಯವನ್ನು ನಿರ್ಮಿಸಿದ ನಿರ್ಮಿಸಿದೆ. ಸೇತುವೆ ಉದ್ದ 540 ಮೀಟರ್, ಅಗಲ 8.3 ಮೀಟರ್ ಇದ್ದು, ಎತ್ತರವು29.97 ಮಿಟರ್ ಇದೆ. ಸೇತುವೆ ಹಾಗೂ ವಾಹನಗಳ ಭಾರವನ್ನು ತಡೆಯಲು 18 ಕಂಬಗಳನ್ನು ಹಾಕಲಾಗಿದೆ ಎನ್ನುತ್ತಾರೆ ಹಿರಿಯ ವಕೀಲರಾದ ಶ್ರೀನಿವಾಸ ರಾವ್ ಕುಲಕರ್ಣಿ.

ಗ್ಯಾಮನ್ ಇಂಡಿಯಾ ಕಂಪನಿಯು ಅಪರೂಪದ ಮುಳುಗು ಸೇತುವೆಯನ್ನು 1976ರಲ್ಲಿ ನಿರ್ಮಿಸಿದೆ.ಆಗ ಸೇತುವೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಕೇವಲ ₹29.86 ಲಕ್ಷ ಆಗಿದೆ.
ಶ್ರೀನಿವಾಸರಾವ್ ಕುಲಕರ್ಣಿ ಹಿರಿಯ ವಕೀಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.