ಸುರಪುರ: ‘ನಾವೆಲ್ಲರೂ ಕನ್ನಡದ ನೆಲದಲ್ಲಿ ಹುಟ್ಟಿದ್ದೇವೆ. ಕನ್ನಡವನ್ನು ಪ್ರೀತಿಸಬೇಕು. ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬರ ಮೇಲಿದೆ’ ಎಂದು ಪ್ರಭು ಕಾಲೇಜಿನ ಪ್ರಾಚಾರ್ಯ ವಾರಿಸ್ ಕುಂಡಾಲೆ ನುಡಿದರು.

ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ 83ನೇ ನಾಡಹಬ್ಬ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ರಂಗಂಪೇಟೆ ಕನ್ನಡ ಸಾಹಿತ್ಯ ಸಂಘ ಸತತ 83 ವರ್ಷಗಳಿಂದ ನಾಡಹಬ್ಬ ಉತ್ಸವದ ಆಚರಿಸುತ್ತಿರುವುದು ಶ್ಲಾಘನೀಯ. ನಾಡಿನ ಹೆಸರಾಂತ ಸಾಹಿತಿ ದಿಗ್ಗಜರು, ಕವಿಗಳು, ವಿಮರ್ಶಕರು, ಪಂಡಿತರು ಈ ಸಂಘದ ನಾಡಹಬ್ಬ ಉತ್ಸವದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿರುವ ಕ್ಷಣಗಳು ಅವಿಸ್ಮರಣೀಯ’ ಎಂದರು.

‘ಮಕ್ಕಳನ್ನು ಮೊಬೈಲ್ ಪೋನ್ಗಳ ಗೀಳಿನಿಂದ ದೂರ ಮಾಡಬೇಕು. ಮೊಬೈಲ್ನಿಂದ ಅಭ್ಯಾಸ ಕುಂಠಿತಗೊಳ್ಳುತ್ತದೆ. ಮಾನಸಿಕ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಪುಸ್ತಕ ಓದುವ, ಬರವಣಿಗೆ ಹವ್ಯಾಸ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಶರಣಗೌಡ ಪಾಟೀಲ ಜೈನಾಪುರ ಮಾತನಾಡಿ, ಸಂಘದ ಅಧ್ಯಕ್ಷ ಸುಗೂರೇಶ ವಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಮೊಹ್ಮದ್ ವಾರೀಸ್ ಕುಂಡಾಲೆ, ಗಿರೀಶ ಶಾಬಾದಿ, ತನ್ವಿರ್ ಅಹ್ಮದ್ ಬೋಡೆ, ರಾಕೇಶ ಚಿನ್ನಾಕಾರ, ಪ್ರಕಾಶ ಗುಳಗಿ, ಹೊನ್ನಪ್ಪ ತೇಲ್ಕರ್ಗೆ ಸನ್ಮಾನಿಸಲಾಯಿತು.

ಪ್ರಮುಖರಾದ ವಾಸುದೇವ ಒಬಳಶೆಟ್ಟಿ, ಶ್ರೀರಂಗ ಮಿರಿಯಾಲ್, ಮಾಧುರಿ ಕಲ್ಕೊಂಡ ವೇದಿಕೆಯಲ್ಲಿದ್ದರು. ಸಂಗಮೇಶ ಗುಳಗಿ ಪ್ರಾರ್ಥನೆ ಗೀತೆ ಹಾಡಿದರು. ಪ್ರಕಾಶ ಅಲಬನೂರ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.