ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಹುಣಸಗಿಯಲ್ಲಿ ಅತಿ ಹೆಚ್ಚು ₹6.59 ಲಕ್ಷ ಸಂಗ್ರಹ

‘ಸುರಪುರ ಗ್ರಾಪಂಗಳಿಂದ ₹65 ಲಕ್ಷ ಕರ ಸಂಗ್ರಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಕರ ಪಾವತಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ತಿಳಿಸಿದರು.

ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಅವರು, ‘ಒಟ್ಟು 42 ಪಂಚಾಯಿತಿಗಳಿಂದ ಡಿಸೆಂಬರ್‌ ತಿಂಗಳ ಅಂತ್ಯದವರೆಗೆ ₹65.69 ಲಕ್ಷ ಕರ ಸಂಗ್ರಹವಾಗಿದೆ’ ಎಂದು ತಿಳಿಸಿದರು.

‘ಈ ಮೊದಲು ಕರ ಸಂಗ್ರಹವಾಗುತ್ತಿರಲಿಲ್ಲ. ತೆರಿಗೆ ಸಂಗ್ರಹದ ಕುರಿತು ಮಾಹಿತಿ ನೀಡಲು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ಒಂದು ತಂಡವನ್ನು ರಚಿಸಿ ಡಿಸೆಂಬರ್ ತಿಂಗಳಲ್ಲಿ ಕರಸಂಗ್ರಹ ಮಾಸಾಚರಣೆ ಮಾಡಲಾಯಿತು’ ಎಂದು ಮಾಹಿತಿ ನೀಡಿದರು.

‘ಇದರಿಂದ ಪಂಚಾಯಿತಿಗಳಲ್ಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿ. ಗ್ರುಪ್ ನೌಕರರ ಶೇಕಡ 40 ರಷ್ಟು ಸಂಬಳ ನೀಡಬಹುದು. ಉಳಿದ 60 ರಷ್ಟು ಹಣವನ್ನು ಗ್ರಾಮಗಳ ಅಭಿವೃದ್ಧಿಗೆ ಉಪಯೋಗಿಸಿ ಕೊಳ್ಳಬಹುದಾಗಿದೆ. ಈ ಮೊದಲು ಕರ ಪಾವತಿಸಿದಾಗ ರಸೀದಿ ನೀಡಲಾಗುತ್ತಿತ್ತು. ಈಗ ಆನಲೈನ್ ಮುಖಾಂತರ ಚಲನ್ ಕರ ವಸೂಲಾತಿಗೆ ಚಾಲನೆ ನೀಡಲಾಗಿದೆ. ಇದರಿಂದ ಜನರಲ್ಲಿಯೂ ತಾವು ಪಾವತಿಸಿದ ಕರ ಸರ್ಕಾರಕ್ಕೆ ತಲುಪುತ್ತಿದೆ ಎನ್ನುವ ಭಾವನೆ ಹಾಗೂ ಅದರ ಸದುಪಯೋಗದ ಕುರಿತು ನಂಬಿಕೆ ಮೂಡಿದೆ’ ಎಂದು ತಿಳಿಸಿದರು.

‘ಹುಣಸಗಿ ಪಂಚಾಯಿತಿಯಲ್ಲಿ ಅತಿ ಹೆಚ್ಚು ₹6.59 ಲಕ್ಷ ಕರ ಸಂಗ್ರಹವಾಗಿದೆ. ದೇವಪುರ ಪಂಚಾಯಿತಿ ₹ 3.60 ಲಕ್ಷ ಕರ ಸಂಗ್ರಹ ಮಾಡಿ ದ್ವಿತೀಯ ಸ್ಥಾನದಲ್ಲಿದೆ’ ಎಂದರು. ‘ಕರ ಸಂಗ್ರಹ ಅಭಿಯಾನ ಜನವರಿ 15ಕ್ಕೆ ಅಂತ್ಯವಾಗುತ್ತದೆ. ಅಷ್ಟರೊಳಗೆ ಸಾರ್ವಜನಿಕರು ತಮ್ಮ ಮನೆ, ನಿವೇಶನ ಹಾಗೂ ನೀರಿನ ತೆರಿಗೆಯನ್ನು ಪಾವತಿಸಿ ಸಹಕರಿಸಬೇಕು. ಜನ ಪ್ರತಿನಿಧಿಗಳು ಇದಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು