ಯಾದಗಿರಿ: ಅಲೆಮಾರಿಗಳಿಗೆ ಆಹಾರ ಧಾನ್ಯ ವಿತರಣೆ ಕಾರ್ಯ ಮೆಚ್ಚುವಂತಹದ್ದು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಅಬ್ಬೆತುಮಕೂರು ವಿಶ್ವಗಂಗು ಟ್ರಸ್ಟ್‌ನ ವತಿಯಿಂದ ನಗರದ ವಾರ್ಡ್ ಸಂಖ್ಯೆ 31 ರಲ್ಲಿ ಬರುವ ಶೈನ್ ಶಾ ದರ್ಗಾದ ಬಳಿಯ ಅಲೆಮಾರಿ ವೇಷಗಾರರ ಸಮುದಾಯಗಳ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದರು.

ಇಂಥ ಕಷ್ಟದ ಸಂದರ್ಭದಲ್ಲಿ ದಾನ, ಧರ್ಮ ಮಾಡುವುದು ದೇಶಸೇವೆ ಮತ್ತು ಈಶಸೇವೆಯಾಗುತ್ತದೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಶರಣಪ್ಪ ಪಾಟೀಲ ಮಾತನಾಡಿ, ಆರ್.ವಿಶ್ವನಾಥರೆಡ್ಡಿ ಅಬ್ಬೆತುಮಕೂರು ಅವರು ವಿಕಲಚೇತನರಾಗಿದ್ದರೂ ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿ ದಾನ ಮಾಡಬೇಕೆಂಬ ಮಹದಾಸೆಯಿಂದ ಬಡಜನರಿಗೆ ದವಸ ಧಾನ್ಯ ದಾನ ಮಾಡುತ್ತಿರುವುದು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ವೀರಶೈವ ಸಮಾಜ ನಗರಾಧ್ಯಕ್ಷ ಅಯ್ಯಣ್ಣ ಹುಂಡೇಕಾರ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಚನ್ನಪ್ಪ ಸಾಹು ಠಾಣಗುಂದಿ, ಸಿದ್ಲಿಂಗಪ್ಪ ಹಿರೇಗೌಡ, ಶಂಕರ ಶಾಸ್ತ್ರಿ, ಡಾ.ವಿನಾಯಕ ಪಾಟೀಲ, ಪ್ರಶಾಂತ ದೇಸಾಯಿ, ಕಾಶೀಮ್ ಅಬ್ಬೆತುಮಕೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.