ಸೋಮವಾರ, ಮಾರ್ಚ್ 1, 2021
19 °C
ಕಂದಕೂರ: ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ

ಕುಟುಂಬಕ್ಕೆ ಕೋಲಿ ಸಮುದಾಯವೇ ಬೆನ್ನೆಲುಬು: ಶರಣಗೌಡ ಕಂದಕೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ‘ನಮ್ಮ ದೊಡ್ಡಪ್ಪ ಸದಾಶಿವರೆಡ್ಡಿ ಕಂದಕೂರ ಹಾಗೂ ಶಾಸಕರಾದ ನಾಗನಗೌಡ ಕಂದಕೂರ ಅವರು ಇಂದು ಬೆಳೆಯಲು ಕಂದಕೂರ ಹಾಗೂ ಚಿಂತನಹಳ್ಳಿ ಗ್ರಾಮಸ್ಥರ ಬೆಂಬಲ ಕಾರಣ. ಜೊತೆಗೆ ನಮ್ಮ ಕುಟುಂಬಕ್ಕೆ ಸೋಲಿನಲ್ಲಿಯೂ ಬೆನ್ನೆಲುಬಾಗಿ ನಿಂತಿದ್ದು ಕೋಲಿ ಸಮಾಜದವರು. ಆದ್ದರಿಂದ ಕಂದಕೂರ, ಚಿಂತನಹಳ್ಳಿ ಗ್ರಾಮಸ್ಥರ ಮತ್ತು ಕೋಲಿ ಸಮುದಾಯದ ಋಣ ತೀರಿಸುವ ಕೆಲಸವನ್ನು ಮಾಡಲು ನಾನು ಸಿದ್ಧನಾಗಿರುತ್ತೇನೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಭರವಸೆ ನೀಡಿದರು.

ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಬುಧವಾರ ಅಂಬಿಗರ ಚೌಡಯ್ಯ ಜಯಂತಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದದಿಂದಾಗಿ ಕಂದಕೂರ ಮನೆತನದ ಹೆಸರು ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲಿ ನಮ್ಮ ಯುವ ಸಮುದಾಯದ ಜವಾಬ್ದಾರಿಯನ್ನು ನಾನು ಹೊರಲು ಸಿದ್ದನಿದ್ದೇನೆ ಎಂದರು.

ಚುನಾವಣೆಯ ಅವಧಿಯಲ್ಲಿ ಮಾತ್ರ ಪಕ್ಷದ ರಾಜಕೀಯ ಮಾಡೋಣ ಅದರ ನಂತರ ನಮ್ಮದೇನಿದ್ದರೂ ಅಭಿವೃದ್ಧಿಯತ್ತ ಗಮನ ಹರಿಸಬೇಕು. ನಾನು ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಕ್ತವಾಗಿ ಎಲ್ಲರ ಸಲಹೆಗಳನ್ನೂ ಪಡೆಯಲು ಸಿದ್ಧ ಎಂದರು.

ಕಂದಕೂರ ಬಸ್ ನಿಲ್ದಾಣದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಸಾರೋಟದಲ್ಲಿ ಕಂದಕೂರ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.

ಪುರಸಭೆ ಅಧ್ಯಕ್ಷೆ ಪಾಪಣ್ಣ ಮನ್ನೆ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ತಮ್ಮಣ್ಣ, ನಿತ್ಯಾನಂದಸ್ವಾಮಿ, ಅಶೋಕ ಸಂಜನೋಳ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಂತೋಷ ನಿರೇಟಿ, ಪುರಸಭೆ ಸದಸ್ಯ ಬಾಲಪ್ಪ ದಸರಿ, ಆಶೋಕ ಕಲಾಲ್, ಜೆಡಿಎಸ್ ಮುಖಂಡ ಕಿಷ್ಟರೆಡ್ಡಿ ಪಾಟೀಲ್, ರಘನಾಥರೆಡ್ಡಿ ಗವಿನೋಳ್, ಪ್ರಕಾಶ್ ನೀರೆಟಿ, ವಿಜಯಕುಮಾರ್ ನೀರೆಟಿ ಸೇರಿದಂತೆ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು