ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಜಾನುವಾರುಗಳಿಗೂ ತಟ್ಟಿದ ಬಿಸಿಲಿನ ತಾಪ

ವಾಟ್ಕರ್ ನಾಮದೇವ
Published 9 ಮೇ 2024, 5:47 IST
Last Updated 9 ಮೇ 2024, 5:47 IST
ಅಕ್ಷರ ಗಾತ್ರ

ವಡಗೇರಾ: ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜಾನುವಾರುಗಳು ತತ್ತರಿಸಿದ್ದು, ಕಳೆದ ವಾರದಿಂದ ಬಿಸಿಲಿನ ತಾಪದ ಜತೆಗೆ ಬಿಸಿಗಾಳಿ ಬೀಸುತ್ತಿರುವ ಪರಿಣಾಮ ಮೇವು ಹರಸಿ ಹೊರಟ ಕುರಿಗಾಹಿಗಳು ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ.

ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಿಸಿಲಿನ ಉಷ್ಣಾಂಶ ಸರಾಸರಿ 40 ರಿಂದ 44 ಡಿಗ್ರಿ ಸೆಲ್ಸಿಯಸ್‌ ಇದೆ.  ಆಕಳು ಹಾಗೂ ಎಮ್ಮೆಗಳು ಈ ಉಷ್ಣಾಂಶವನ್ನು ಸಹಿಸಿಕೊಳ್ಳುತ್ತವೆ. ಆದರೆ ಸೂಕ್ಷ್ಮ ಪ್ರಾಣಿಯಾದ ಕುರಿಗಳು ಬಿಸಿಲಿನ ತಾಪದಿಂದ  ತಲೆ ಸುತ್ತು ಬರುವುದು, ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು, ಶ್ವಾಸಕೋಶದಲ್ಲಿ ತೊಂದರೆ ಹೀಗೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಉಷ್ಣಾಂಶ ಹೆಚ್ಚಾದರೆ ಕೆಲವೊಮ್ಮೆ ಕುರಿಗಳು ಸಾಯುವ ಸಂಭವಗಳು ಹೆಚ್ಚು ಎನ್ನುತ್ತಾರೆ ಕುರಿಗಾಹಿಗಳು.

ಸಾಮಾನ್ಯವಾಗಿ ಕುರಿಗಳಿಗೆ 38 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಉಷ್ಣಾಂಶ ಇರಬೇಕು. ಆಗ ಮಾತ್ರ ಕುರಿಗಳು ಆರೋಗ್ಯವಾಗಿರುತ್ತವೆ. ಸರಿಯಾದ ಸಮಯಕ್ಕೆ ಹುಲ್ಲು ತಿನ್ನುವುದು, ನೀರನ್ನು ಕುಡಿಯುವ ಮೂಲಕ   ಸದೃಢವಾಗಿರುತ್ತವೆ. ಆದರೆ ಹೆಚ್ಚಾಗುತ್ತಿರುವ ತಾಪಮಾನದಿಂದ ಕುರಿಗಾಹಿಗಳು ತಮ್ಮ ಕುರಿಗಳನ್ನು ಹೇಗೆ ರಕ್ಷಿಸಿ ಕೊಳ್ಳಬೇಕು ಎಂಬ ಆತಂಕದಲ್ಲಿ ಇದ್ದಾರೆ.

ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗಿರು ಪರಿಣಾಮ ಈಗಾಗಲೇ ಕುರಿಗಾಹಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಬೆಳಗಿನ ಜಾವ 6 ಗಂಟೆಯಿಂದ 10 ಗಂಟೆವರೆಗೆ ಕುರಿಗಳನ್ನು ಮೇಯಿಸಬೇಕು. ಸಂಜೆ 5ರ ತನಕ ನೆರಳಿನಲ್ಲಿ ಇರಿಸಿ ಮತ್ತೆ ಹೊರಗೆ ಬಿಡಬಹುದು.
ಬಸವರಾಜ ಹಿರಿಯ ಜಾನುವಾರು ಅಭಿವೃದ್ಧಿ ಅಧಿಕಾರಿ ವಡಗೇರಾ
ಕುರಿಗಳಿಗೆ ಮನ್ಯಾಗ ಮೇವಿಲ್ಲ. ಕುಡಿಯಾಕ್ ನೀರಿಲ್ಲ. ಅಡವ್ಯಾಗನು ಕುರಿಗಳಿಗೆ ಮೇವಿಲ್ಲ ನೀರಿಲ್ಲ. ನಿಂತಲ್ಲೆ ನಿಂತರೆ ಅವುಗಳ ಕಾಲು ಜೋಮ ಹಿಡಿಯುತ್ತವೆ. ಅದಕ್ಕಾಗಿ ಕುರಿಗಳನ್ನು ಹೊರಗೆ ಮೇಯಿಸಲು ತರ್ತಿವಿ
–ಮಲ್ಲಪ್ಪ ಪೂಜಾರಿ ಕುರಿಗಾಹಿ ವಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT