ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಎಸ್‌ಎಲ್‌ಸಿ: ಗ್ರಾಮೀಣ ಭಾಗದಲ್ಲಿ ಇಳಿಕೆಯಾದ ಫಲಿತಾಂಶ

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100ರಷ್ಟು ಪಡೆದ 2 ಶಾಲೆಗಳು, 8ಶೂನ್ಯ ಫಲಿತಾಂಶ ಪಡೆದ ಶಾಲೆಗಳು
Published 14 ಮೇ 2024, 8:54 IST
Last Updated 14 ಮೇ 2024, 8:54 IST
ಅಕ್ಷರ ಗಾತ್ರ

ಯಾದಗಿರಿ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತೀರ್ಣ ಸಂಖ್ಯೆ ಇಳಿಕೆಯಾಗಿದೆ.

ಗ್ರಾಮೀಣ ಭಾಗದ 5, 859 ಬಾಲಕರು, 5,976 ಬಾಲಕಿಯರು ಸೇರಿದಂತೆ ಒಟ್ಟು 11,835 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ 2,484 ಬಾಲಕರು, 3,588 ಬಾಲಕಿಯರು ಸೇರಿ 6,072 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 42.40 ಬಾಲಕರು, ಶೇ 60.04 ರಷ್ಟು ಬಾಲಕಿಯರು ಸೇರಿದಂತೆ ಒಟ್ಟಾರೆ ಗ್ರಾಮೀಣ ಭಾಗದಿಂದ ಶೇ 51.31 ಪ್ರತಿಶತ ಫಲಿತಾಂಶ ಬಂದಿದೆ.

ಇನ್ನೂ ನಗರ ಪ್ರದೇಶದಿಂದ 2,464 ಬಾಲಕರು, 2,690 ಬಾಲಕಿಯರು ಸೇರಿ 5,154 ವಿದ್ಯಾರ್ಥಿಗಳು ಪ‍ರೀಕ್ಷೆಗೆ ಹೆಸರು ನಮೂದಿಸಿಕೊಂಡಿದ್ದು, 1,375 ಬಾಲಕರು, 1,817 ಬಾಲಕಿಯರು ಸೇರಿದಂತೆ 3,192 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 55.80 ರಷ್ಟು ಬಾಲಕರು, ಶೇ 67.55 ಬಾಲಕಿಯರು, ಶೇ 61.93 ರಷ್ಟು ಫಲಿತಾಂಶ ಪಡೆದಿದ್ದಾರೆ.

ರೆಗುಲರ್‌ ವಿದ್ಯಾರ್ಥಿಗಳು 16,989 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಶೇ 46.37 ಬಾಲಕರು, ಶೇ 62.37 ಬಾಲಕಿಯರು ಸೇರಿದಂತೆ ಶೇ 54.53 ರಷ್ಟು ಫಲಿತಾಂಶ ಬಂದಿದೆ.

ಪ್ರಥಮ ಭಾಷಾ ಪರೀಕ್ಷೆಗೆ ಬಾಲಕ, ಬಾಲಕಿಯರು ಸೇರಿ 11,989 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಶೇ 70.57 ರಷ್ಟು ಪ್ರತಿಶತ ದಾಖಲಾಗಿದೆ. ದ್ವಿತೀಯ ಭಾಷೆಯಲ್ಲಿ 10,352 ವಿದ್ಯಾರ್ಥಿಗಳಲ್ಲಿ ಶೇ 60.93 ಪಾಸಾಗಿದ್ದಾರೆ. ತೃತೀಯ ಭಾಷೆಗೆ 10,901 ವಿದ್ಯಾರ್ಥಿಗಳಲ್ಲಿ ಶೇ 64.17 ರಷ್ಟು ಪ್ರತಿಶತ ದಾಖಲಿಸಿದ್ದಾರೆ. ಗಣಿತ ಪರೀಕ್ಷೆಗೆ 9,751 ವಿದ್ಯಾರ್ಥಿಗಳಲ್ಲಿ ಶೇ 57.40 ರಷ್ಟು, ವಿಜ್ಞಾನ ವಿಷಯದಲ್ಲಿ 9,580 ವಿದ್ಯಾರ್ಥಿಗಳಲ್ಲಿ ಶೇ 56.39, ಸಾಮಾಜ ವಿಜ್ಞಾನ ವಿಷಯದಲ್ಲಿ 10,730 ವಿದ್ಯಾರ್ಥಿಗಳಲ್ಲಿ ಶೇ 63.16 ರಷ್ಟು ಫಲಿತಾಂಶ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT