ಸುರಪುರ: ‘ತಿಂಥಣಿಯ ಮೌನೇಶ್ವರ ಜಾತ್ರೆ ತಾಲ್ಲೂಕಿನ ಅತಿ ದೊಡ್ಡ ಜಾತ್ರೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಜಾತ್ರೆಯ ಯಶಸ್ವಿಗೆ ಎಲ್ಲ ಅಧಿಕಾರಿಗಳು, ವಿಶ್ವಕರ್ಮ ಸಮುದಾಯ ಮತ್ತು ಭಕ್ತರು ಸಹಕರಿಸಬೇಕು’ ಎಂದು ತಹಶೀಲ್ದಾರ್ ಎಚ್.ಎ. ಸರಕಾವಸ ತಿಳಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಈ ಕುರಿತು ಪೂರ್ವಭಾವಿ ಸಭೆ ನಡೆಸಿ ಅಗತ್ಯ ಸೂಚನೆ ಮತ್ತು ಜಾತ್ರೆಯ ಮಾಹಿತಿ ನೀಡಿದರು.

‘ಜ. 28 ರಂದು ಜಾತ್ರೆ ದಶಮಿ ಆಚರಣೆಯೊಂದಿಗೆ ಆರಂಭವಾಗುತ್ತದೆ. ಸುರಪುರದಿಂದ ಪಲ್ಲಕ್ಕಿ ತಿಂಥಣಿಗೆ ಹೋಗುತ್ತದೆ. 29 ರಂದು ಏಕಾದಶಿ, ಸಂಜೆ ಮಹಾಪ್ರಸಾದ, 30 ರಂದು ಪ್ರಥಮ ಪಲ್ಲಕ್ಕಿ ಸೇವೆ, 31 ರಂದು ಧಾರ್ಮಿಕ ಕಾರ್ಯಕ್ರಮ, ಜಾವಳ, ಸಾಮೂಹಿಕ ಉಪನಯನ, ಸಂಗೀತ ಸೇವೆ, ಫೆ. 1 ರಂದು ಸಂಜೆ 5 ಗಂಟೆಗೆ ರಥೋತ್ಸವ, ಪಲ್ಲಕ್ಕಿ ಮಹಾಸೇವೆ, 2 ರಂದು ಧೂಳಗಾಯಿ, ಗುಹಾಪ್ರವೇಶ ನಡೆಯಲಿದೆ’ ಎಂದು ವಿವರಿಸಿದರು.

‘ಆರೋಗ್ಯ ಇಲಾಖೆಯವರು ಜಾತ್ರೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ ಭಕ್ತರ ಯೋಗಕ್ಷೇಮ ನೋಡಿಕೊಳ್ಳಬೇಕು. ಪೊಲೀಸರು ಯಾವುದೇ ಕಳ್ಳತನ, ಜಗಳ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಬೇಕು. ಪಂಚಾಯಿತಿಯವರು ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಾರಿಗೆ ಇಲಾಖೆಯವರು ಸೂಕ್ತ ಬಸ್ ಸೌಕರ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ವಿವಿಧ ಇಲಾಖೆಯ ಅಧಿಕಾರಿಗಳು, ವಿಶ್ವಕರ್ಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.