ಸೋಮವಾರ, ಆಗಸ್ಟ್ 8, 2022
21 °C

ಜಾನುವಾರುಗಳ ದಾಹ ನೀಗಿಸುವ ಜಕರಡ್ಡಿ ಫಾರ್ಮ ಹೌಸ್

ಪವನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಬೇಸಿಗೆ ಸಮಯದಲ್ಲಿ ಜನ ಸಾಮಾನ್ಯರು ಮಾತ್ರವಲ್ಲದೆ ಜಾನುವಾರುಗಳು, ಪಕ್ಷಿಗಳು ಕೂಡ ನೀರಿಗಾಗಿ ಪರಿತಪಿಸುತ್ತಿವೆ. ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಸ್ಥಳೀಯರಾದ ಕಿರಣ ಜಕರೆಡ್ಡಿ ಅವರು ತಮ್ಮ ಫಾರ್ಮ್‌ಹೌಸ್ ಮುಂದೆ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ಜೀವಜಲ ಪೂರೈಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣ ಹೊರವಲಯದಲ್ಲಿರುವ ಕೆಂಭಾವಿಯಿಂದ ನಗನೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ತಮ್ಮ ಜಕರಡ್ಡಿ ಫಾರ್ಮಹೌಸ್ ದ್ರಾಕ್ಷಿ ತೋಟದ ಜಮೀನಿನ ಬಳಿ ತಮ್ಮ ಸ್ವಂತ ಖರ್ಚಿನಿಂದ ನೀರಿನ ತೊಟ್ಟಿ ನಿರ್ಮಿಸಿ ನಿತ್ಯ ನೂರಾರು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದಾರೆ.

ಅಲ್ಲದೆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಅರವಟಿಕೆ ಇಡುವ ಮೂಲಕ ಜನರ ದಾಹವನ್ನು ನೀಗಿಸುತ್ತಿದ್ದಾರೆ.

ಮನುಷ್ಯ, ಪ್ರಾಣಿ, ಪಕ್ಷಿಗಳು ನೆಮ್ಮದಿಯಿಂದ ಬದುಕಬೇಕಾದರೆ ಗಿಡ ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಿ ಉಳಿಸಬೇಕಾಗಿದೆ ಎನ್ನುತ್ತಾರೆ ಡಾ.ಕಿರಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು