ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಬೇವಿಗೆ ಬೇಡಿಕೆ ಹೆಚ್ಚಳ; ಟೊಮೆಟೊ ಅಗ್ಗ, ದೊಣ್ಣೆಮೆಣಸಿನಕಾಯಿ ದುಬಾರಿ

ಸ್ಥಳೀಯ ಮಟ್ಟದಲ್ಲಿ ಸಿಗದ ಸೊಪ್ಪು
Last Updated 27 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಯಾದಗಿರಿ: ನಗರದ ವಿವಿಧ ಮಾರುಕಟ್ಟೆಗಳಲ್ಲಿ ತರಕಾರಿ ದರ ಅಗ್ಗವಾಗಿದ್ದು, ಗ್ರಾಹಕರಿಗೆ ಖುಷಿ ತಂದಿದೆ.

ತರಕಾರಿಗಳಲ್ಲಿ ಟೊಮೆಟೊ ಅಗ್ಗವಾಗಿದ್ದು, ದೊಣ್ಣೆಮೆಣಸಿನಕಾಯಿ ದುಬಾರಿಯಾಗಿದೆ. ಟೊಮೆಟೊ ಕೆ.ಜಿಗೆ ₹10ರಿಂದ 15 ಕೆ.ಜಿ ಇದ್ದು, ಎಲ್ಲ ತರಕಾರಿಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ.

ಈ ವರ್ಷದ ಆರಂಭದಿಂದಲೂ ತರಕಾರಿ ಬೆಲೆ ಹೆಚ್ಚಳ ಕಂಡಿಲ್ಲ. ವ್ಯಾಪಾರಿಗಳಿಗೆ ಸುಗ್ಗಿಯಾಗಿದ್ದು, ರೈತರಿಗೆ ನಷ್ಟವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿದ ಬೆಳೆಗೆ ತಕ್ಕಂತೆ ಬೆಲೆ ಇಲ್ಲದಂತಾಗಿದೆ. ಮಳೆಗಾಲ, ಚಳಿಗಾಲದಲ್ಲಿ ಹೆಚ್ಚು ಬೇಡಿಕೆ ಇದ್ದ ಬದನೆಕಾಯಿಗೆ ದರ ಕುಸಿತವಾಗಿದೆ. ಒಂದೊಂದು ಕಡೆ ಕೆ.ಜಿಗೆ ₹25ರಿಂದ ₹25 ಗೆ ಮಾರಾಟವಾಗುತ್ತಿದೆ.

ತರಕಾರಿ ದರ: ಕಳೆದ ಎರಡು ವಾರಗಳಿಂದೆ ಈರುಳ್ಳಿ ಬೆಲೆ ಕೆ.ಜಿಗೆ ₹60 ಇತ್ತು. ಆದರೆ, ಈ ವಾರ ಬೆಲೆ ಇಳಿಕೆಯಾಗಿದ್ದು, ಕೆ.ಜಿಗೆ ₹40-35 ಇದೆ. ದೊಡ್ಡ ಗಾತ್ರದ ಈರುಳ್ಳಿಗೆ ಉತ್ತಮ ಬೆಲೆ ಇದೆ. ಸಣ್ಣ ಗಾತ್ರದ ಈರುಳ್ಳಿಯೂ ಬೆಲೆ ಕಡಿಮೆ ಇಲ್ಲ.

ಚವಳೆಕಾಯಿಗೆ ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ. ಬೆಳಿಗ್ಗೆ ಮಾತ್ರ ಹೆಚ್ಚಾಗಿ ಮಾರಾಟವಾಗುತ್ತಿದೆ. ಸಂಜೆ ಕೆಲ ಕಡೆ ಚವಳೆಕಾಯಿ ಸಿಗುತ್ತಿಲ್ಲ. ಈಗ ಕೆ.ಜಿಗೆ ₹50–60 ದರ ಇದೆ.

ಸೊಪ್ಪುಗಳ ದರ: ತರಕಾರಿ ದರದಂತೆ ಸೊಪ್ಪುಗಳ ದರವೂ ಇಳಿಕೆಯಾಗಿದೆ. ಮೆಂತ್ಯೆ ಸೊಪ್ಪು ₹10ಗೆ 4 ಕಟ್ಟು, ಪಾಲಕ್‌ ಸೊಪ್ಪು ₹10ಗೆ 3, ರಾಜಗಿರಿ ಸೊಪ್ಪು ₹10ಗೆ ಮೂರು ಕಟ್ಟು ಮಾರಾಟವಾಗುತ್ತಿದೆ.

ಪುಂಡಿ ಪಲ್ಯೆ ಸೊಪ್ಪು ಅಗ್ಗವಾಗಿದ್ದು, ₹10ಗೆ 5 ಕಟ್ಟು ಸಿಗುತ್ತಿದೆ. ಕೊತ್ತಂಬರಿ ಚಿಕ್ಕ ಗಾತ್ರದ ಸೊಪ್ಪು ₹10, ದೊಡ್ಡ ಗಾತ್ರದಕ್ಕೆ ₹20 ಇದೆ. ಆದರಂತೆ ಪುದೀನಾ ಸೊಪ್ಪು ₹15–20 ದರವಿದೆ. ಶುಂಠಿ ಕೆ.ಜಿಗೆ ₹60, ಬೆಳ್ಳೊಳ್ಳಿ ₹100 ಬೆಲೆ ಇದೆ.

***

ಕರಿಬೇವು ಬೆಲೆ ಹೆಚ್ಚಳ

ಜಿಲ್ಲೆಯಲ್ಲಿ ಕರಿಬೇವು ಬೆಲೆ ಏರಿಕೆಯಾಗಿದೆ. ₹160 ಕೆ.ಜಿಗೆ ಮಾರಾಟವಾಗುತ್ತಿದೆ. ಮಳೆಗಾಲದಲ್ಲಿ ಅಧಿಕ ಮಳೆಯಾಗಿ ಜಿಲ್ಲೆಯಲ್ಲಿ ಬೆಳೆದಿದ್ದ ಕರಿಬೇವು ಗಿಡಗಳು ಹಾಳಾಗಿವೆ. ಈಗ ತೆಲಂಗಾಣ, ಆಂಧ್ರ ಪ್ರದೇಶದಿಂದ ಆಮದು ಆಗುತ್ತಿವೆ. ಸ್ಥಳೀಯ ಮಟ್ಟದಲ್ಲಿ ಲಭ್ಯತೆ ಕೊರತೆ ಇರುವುದರಿಂದ ತುಟ್ಟಿಯಾಗಿದೆ. 10ರಿಂದ 15 ಕಡ್ಡಿಗಳನ್ನು ಒಂದು ಕಟ್ಟು ಮಾಡಿ ₹5ಗೆ ಒಂದರಂತೆ ತರಕಾರಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಕೆಲ ಅಂಗಡಿಗಳಲ್ಲಿ ಕರಿಬೇವು ತರಿಸುವುದನ್ನೇ ನಿಲ್ಲಿಸಲಾಗಿದೆ.
***
ತರಕಾರಿ ದರ (₹ ಕೇಜಿಗಳಲ್ಲಿ)

ಟೊಮೆಟೊ;10-15

ಬದನೆಕಾಯಿ;30-25

ಬೆಂಡೆಕಾಯಿ;50-45

ದೊಣ್ಣೆಮೆಣಸಿನಕಾಯಿ;60;55

ಆಲೂಗಡ್ಡೆ;30-25

ಈರುಳ್ಳಿ;40-35

ಎಲೆಕೋಸು;20–25

ಹೂಕೋಸು;40-45

ಚವಳೆಕಾಯಿ;50–60

ಬೀನ್ಸ್; 50-60

ಗಜ್ಜರಿ;30-25

ಸೌತೆಕಾಯಿ;30-20

ಮೂಲಂಗಿ;20-30

ಮೆಣಸಿನಕಾಯಿ;40-45

ಸೋರೆಕಾಯಿ;35–40

ಬಿಟ್ ರೂಟ್;40-45

ಹೀರೆಕಾಯಿ;50-60

ಹಾಗಲಕಾಯಿ;55-60

ತೊಂಡೆಕಾಯಿ;35-40

ಅವರೆಕಾಯಿ;40–50

***

ಮುಂದಿನ ತಿಂಗಳು ತರಕಾರಿ ದರ ಹೆಚ್ಚಳವಾಗಬಹುದಾಗಿದೆ. ಈಗಂತೂ ₹60 ಒಳಗೆ ತರಕಾರಿ ಲಭ್ಯವಿದೆ.

-ಎಂ.ಅಕ್ಬರ್, ವ್ಯಾಪಾರಿ

***

ಬಿಸಿಲಿನ ಜಳ ಶುರುವಾಗಿದ್ದರೂ ತರಕಾರಿ ಬೆಳೆಗಳ ದರ ಇನ್ನೂ ಕಡಿಮೆ ದರದಲ್ಲಿ ಸಿಗುತ್ತಿದೆ. ಎಲ್ಲ ವಿಧಧ ತರಕಾರಿ ಅಗ್ಗವಾಗಿದ್ದು, ಗ್ರಾಹಕರಿಗೆ ಖುಷಿಯಾಗಿದೆ

-ರಿಯಾಜ್‌, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT