ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ದಾಖಲೆಗಳಿಲ್ಲದ ₹3.73 ಲಕ್ಷ ಮೌಲ್ಯದ ರಸಗೊಬ್ಬರ ವಶ

Last Updated 16 ಆಗಸ್ಟ್ 2020, 16:19 IST
ಅಕ್ಷರ ಗಾತ್ರ

ಶಹಾಪುರ:ಯಾವುದೇ ದಾಖಲಾತಿ ಬಿಲ್ ಇಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಜೈಕಿಸಾನ್ ಮಂಗಳಾ ರಸಗೊಬ್ಬರದ 298 ಚೀಲಗಳನ್ನು ಭೀಮರಾಯನಗುಡಿ ಪೊಲೀಸರು, ಕೃಷಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಗುರುದೇಸಾಯಿ ನೇಲೋಗಿ, ಹಣಮಂತ್ರರಾಯ ಮೇಟಿ, ಸುಜಾತ ಅಯ್ಯಪ್ಪ ಮಡಿವಾಳ, ಅಂಬ್ರೇಷ್ ಹಣಮಂತ್ರರಾಯ ನಾಟಿಕರ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಸಗೊಬ್ಬರ ತುಂಬಿದ್ದ ಲಾರಿ ಭೀಮರಾಯನಗುಡಿ– ಜೇವರ್ಗಿ ಮುಖ್ಯರಸ್ತೆಯ ಸಾದ್ಯಾಪುರ ಸೀಮಾಂತರ ಕೊಡಮನಹಳ್ಳಿ ಕ್ರಾಸ್ ಹತ್ತಿರ ತೆರಳುತ್ತಿದ್ದಾಗ ಲಾರಿಯನ್ನು ವಶಕ್ಕೆ ಪಡೆದು ಅದರಲ್ಲಿದ್ದ ₹3,73,990 ಮೌಲ್ಯದ ರಸಗೊಬ್ಬರ ಜಪ್ತಿ ಮಾಡಿದ್ದಾರೆ.

ಗೋಗಿರೈತ ಸಂಪರ್ಕ ಕೇಂದ್ರದಕೃಷಿ ಅಧಿಕಾರಿಅಮರೇಶ ನಾಗಪ್ಪ ದೂರು ನೀಡಿದ ಮೇರೆಗೆ ಭೀಗುಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕುಸಿದ ಮನೆ: ದವಸ ಧಾನ್ಯ ಹಾನಿ

ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ಸಂಗಮ್ಮ ನಾಗಣ್ಣ ಬಸ್ಸನವರ ಅವರ ಮನೆ ಸತತ ಮಳೆಗೆ ಕುಸಿದು ಬಿದ್ದು, ದವಸ, ಧಾನ್ಯ ಹಾನಿಯಾಗಿದೆ. ಎರಡು ಚೀಲ ಜೋಳ, ಒಂದು ಚೀಲ ಅಕ್ಕಿ, 25 ಕೆಜಿ ತೊಗರಿ ಹಾಳಾಗಿದೆ. ಮಣ್ಣಿನ ಅಡಿಯಲ್ಲಿ ಇನ್ನಿತರ ವಸ್ತುಗಳಿವೆ ಎಂದು ತಿಳಿದು ಬಂದಿದೆ. ಪ್ರಾಣಾಪಾಯ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT