ಮನ್ನೆಚ್ಚರಿಕೆಯ ಕ್ರಮವಾಗಿ ವಡಗೇರಾ ತಹಶೀಲ್ದಾರ್ ಶ್ರೀನಿವಾಸ ಚಾಪೇಲ್ ಕಂದಳ್ಳಿ ಬ್ರೀಜ್ ಕಂ ಬ್ಯಾರೇಜ್‌ಗೆ ಬೇಟಿ ನೀಡಿದ ಪರಿಈಶಲನೆ ನಡೆಸಿದ್ದಾರೆ. ಬಳಿಕ ನದಿ ತಟದಲ್ಲಿ ಬರುವ ಶಿವನೂರ, ಬೇನಕನಹಳ್ಳಿ,ಮಾಚನೂರ, ಬಿಳ್ಹಾರ, ಬೂದಿಹಾಳ, ಹಾಗೂ ಇನ್ನಿತರ ಗ್ರಾಗಳಿಗೆ ಭೇಟಿ ನೀಡಿ, ‘ಯಾರು ನದಿಗೆ ಇಳಿಯಬಾರದು ಹಾಗೂ ಜಾನುವಾರುಗಳನ್ನು ನದಿಯ ಇಳಿಸಬಾರದು. ನದಿ ಪಾತ್ರದಲ್ಲಿ ಇಳಿದು ಕೃಷಿ ಚಟುವಟಿಕೆಗಳನ್ನು ನಡೆಸಬಾರದು’ ಎಂದು ತಿಳಿಸಿದರು.