ಮಂಗಳವಾರ, ಜನವರಿ 19, 2021
26 °C
₹60 ಕ್ಕಿಂತ ಮೇಲೇರದ ತರಕಾರಿ, ಸಂಕ್ರಾಂತಿ ನಂತರ ದರ ಏರಿಕೆ ಸಾಧ್ಯತೆ

ತರಕಾರಿ ಅಗ್ಗ; ಗ್ರಾಹಕರಿಗೆ ಸುಗ್ಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ವಿವಿಧ ಮಾರುಕಟ್ಟೆಗಳಲ್ಲಿ ತರಕಾರಿ, ಸೊಪ್ಪು ದರಗಳು ಅಗ್ಗವಾಗಿವೆ. ಇದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ತರಕಾರಿ ಸಿಗುತ್ತಿವೆ.

ತರಕಾರಿ ಆವಕ ಹೆಚ್ಚಾಗಿರುವುದರಿಂದ ದರದಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲ. ಆದರೆ, ಸಂಕ್ರಾಂತಿ ನಂತರ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿಗಳು ಹೇಳಿದರು.

ಕಳೆದ ಒಂದು ತಿಂಗಳಿಂದ ತರಕಾರಿ ದರ ಏರಿಕೆಯಾಗಿಲ್ಲ. ₹10ರಿಂದ ಆರಂಭಗೊಂಡು ₹60ಗೆ ಎಲ್ಲ ವಿಧದ ತರಕಾರಿ ಲಭ್ಯವಿದೆ. ಇದು ಗ್ರಾಹಕರಿಗೆ ಸುಗ್ಗಿಯಾಗಿದೆ.

ತರಕಾರಿಗಳಲ್ಲಿ ಟೊಮೆಟೊ ತೀರಾ ಅಗ್ಗವಾಗಿದೆ. ನಾಟಿ ಟೊಮೆಟೊ ಕೇ.ಜಿ.ಗೆ ₹20 ಇದ್ದರೆ ಹೈಬ್ರಿಡ್‌ ಟೊಮೆಟೊ ₹15 ಇದೆ. ಇದರಿಂದ ಗ್ರಾಹಕರು ಎರಡು ವಿಧದ ಟೊಮೆಟೊ ಖರೀದಿಸುತ್ತಿದ್ದಾರೆ.

ನಾಟಿ ಗಜ್ಜರಿ ವಿಶೇಷ

ನಗರದ ಮಾರುಕಟ್ಟೆಗಳಲ್ಲಿ ನಾಟಿ ಗಜ್ಜರಿ ಸಿಗುತ್ತಿದೆ. ಬೇಸಿಗೆ ಆರಂಭವಾದರೆ ನಾಟಿ ಬೆಳೆಯುವುದಿಲ್ಲ. ಹೀಗಾಗಿ ಚಳಿಗಾಲದಲ್ಲಿ ಹೆಚ್ಚು ಸಿಗುತ್ತಿದೆ. ನಾಟಿ ಗಜ್ಜರಿ ಕೆಂಬಣ್ಣ ಹೆಚ್ಚಿರುವುದಿಲ್ಲ. ಆದರೆ, ಹೈಬ್ರೀಡ್‌ ಗಜ್ಜರಿ ಕೆಂಪು ಬಣ್ಣ ಹೊಂದಿರುತ್ತದೆ.

ಸಿಹಿ ಗೆಣಸು ಮಾರುಕಟ್ಟೆಗೆ

ತರಕಾರಿ ಅಂಗಡಿಗಳಲ್ಲಿ ಅಲ್ಲಲ್ಲಿ ಸಿಹಿ ಗೆಣಸು ಕಾಣಸಿಗುತ್ತದೆ. ಸೊಲ್ಲಾ‍ಪುರ ಮತ್ತಿತರ ಕಡೆಯಿಂದ ಆವಕವಾಗುತ್ತಿದ್ದು, ₹40 ಕೇ.ಜಿಗೆ ಮಾರಾಟವಾಗುತ್ತಿದೆ. ಹೆಚ್ಚಾಗಿ ಬೇಸಿಗೆ ಆರಂಭದಲ್ಲಿ ಸಿಹಿ ಗೆಣಸು ಮಾರುಕಟ್ಟೆಗಳಲ್ಲಿ ಬರುತ್ತದೆ.

ಹೆಚ್ಚು ದರವಿರುವ ತರಕಾರಿ

ಹೂಕೋಸು, ಚವಳೆ, ಬದನೆ, ಬೀನ್ಸ್, ಗಜ್ಜರಿ, ಹೀರೆಕಾಯಿ, ಹಾಗಲಕಾಯಿ, ಅವರೆಕಾಯಿ ತರಕಾರಿ ಕೇ.ಜಿಗೆ ₹50–60 ದರವಿದೆ. ಮಿಕ್ಕ ತರಕಾರಿ ₹40ರ ಒಳಗೆ ದರವಿದೆ.

ಸೊಪ್ಪುಗಳ ದರ

ಸೊಪ್ಪುಗಳ ದರದಲ್ಲಿ ಗಣನೀಯ ಇಳಿಕೆ ಕಂಡಿದೆ. ಈರುಳ್ಳಿ ಸೊಪ್ಪು ಮಾತ್ರ ₹60 ಕೇ.ಜಿ ಇದೆ. ಉಳಿದ ಸೊಪ್ಪುಗಳು ₹5ರಿಂದ 10 ಒಳಗೆ ಸಿಗುತ್ತವೆ.

ಮೆಂತ್ಯೆ ಚಿಕ್ಕ ಗಾತ್ರ ಒಂದಕ್ಕೆ ₹5, ದೊಡ್ದ ಗಾತ್ರದ್ದಕ್ಕೆ ₹10 ದರವಿದೆ. ಕೊತ್ತಂಬರಿ ಸೊಪ್ಪು ₹5–10 ಇದೆ. ಪುದೀನಾ ಒಂದು ಕಟ್ಟು ₹10ರಿಂದ 15, ಸಬ್ಬಸಗಿ ₹5, ಪಾಲಕ್ ಸೊಪ್ಪು ₹5, ಪುಂಡಿಪಲ್ಯ ₹10ಗೆ ಮೂರು ಕಟ್ಟು, ರಾಜಗಿರಿ ಸೊಪ್ಪು ₹10ಗೆ ಮೂರು ಕಟ್ಟು ಸಿಗುತ್ತಿದೆ.

***

ಒಂದು ವಾರದಿಂದಲೂ ಕರಿಬೇವು ದರ ಹೆಚ್ಚಾಗಿದೆ. ₹120 ಕೇ.ಜಿ. ನಮಗೆ ಖರೀದಿ ಇದೆ. ₹10ಗೆ ಹಿಡಿಕೊಡಬಹುದು. ಚಳಿಗೆ ಹೆಚ್ಚು ಬೆಳೆದಿಲ್ಲ

- ಬಸವರಾಜ ಚಿಂತನಹಳ್ಳಿ, ವ್ಯಾಪಾರಿ

***

ತರಕಾರಿ ದರ (₹ ಕೇಜಿಗಳಲ್ಲಿ)

ಟೊಮೆಟೊ: 10-15
ಬದನೆಕಾಯಿ: 50-60
ಬೆಂಡೆಕಾಯಿ: 30-40
ದೊಣ್ಣೆಮೆಣಸಿನಕಾಯಿ;35;40
ಆಲೂಗಡ್ಡೆ:40-45
ಈರುಳ್ಳಿ:40-45
ಎಲೆಕೋಸು: 35–40
ಹೂಕೋಸು:50-60
ಚವಳೆಕಾಯಿ:50–60
ಬೀನ್ಸ್: 50-60
ಗಜ್ಜರಿ: 50-60
ಸೌತೆಕಾಯಿ: 30-40
ಮೂಲಂಗಿ: 30-40
ಮೆಣಸಿನಕಾಯಿ: 40-50
ಸೋರೆಕಾಯಿ:35–40
ಬಿಟ್ ರೂಟ್:40-50
ಹೀರೆಕಾಯಿ:50-60
ಹಾಗಲಕಾಯಿ:50-60
ತೊಂಡೆಕಾಯಿ:35-40
ಅವರೆಕಾಯಿ;50–60

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.