ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ತರಕಾರಿ ದರದಲ್ಲಿ ಏರಿಳಿತ

ಬೇಸಿಗೆ ಸೀಸನ್‌ ಆರಂಭ; ಸೊಪ್ಪುಗಳ ದರ ಯಥಾಸ್ಥಿತಿ
Published 4 ಫೆಬ್ರುವರಿ 2024, 6:35 IST
Last Updated 4 ಫೆಬ್ರುವರಿ 2024, 6:35 IST
ಅಕ್ಷರ ಗಾತ್ರ

ಯಾದಗಿರಿ: ಬೇಸಿಗೆ ಆರಂಭವಾಗಿದ್ದು, ತರಕಾರಿ ದರಯಲ್ಲಿ ಏರಿಳಿಕೆ ಕಂಡು ಬರುತ್ತಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಟೊಮೆಟೊ ದರ ಪ್ರತಿ ಕೆಜಿಗೆ ₹5 ಜಾಸ್ತಿಯಾಗಿದೆ. ಹಸಿ ಶುಂಠಿ ಕಳೆದ ವಾರಕ್ಕಿಂತ ಈ ವಾರ ₹20 ಜಾಸ್ತಿಯಾಗಿ ಕೆಜಿಗೆ ₹140ರಿಂದ ₹160ರ ತನಕ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ ದರವೂ ಮತ್ತಷ್ಟು ಏರಿಕೆ ಕಂಡಿದೆ.

ಇದರ ಜೊತೆಗೆ ಬದನೆಕಾಯಿ, ಬೆಂಡೆಕಾಯಿ, ದೊಣ್ಣೆಮೆಣಸಿನಕಾಯಿ, ಎಲೆಕೋಸು, ಹೂಕೋಸು, ಗಜ್ಜರಿ; ಸೌತೆಕಾಯಿ ದರವು ಕೆಜಿಗೆ ₹10ರಿಂದ ₹20 ಏರಿಕೆಯಾಗಿದೆ.

ಉಳಿದಂತೆ ಮೂಲಂಗಿ, ಸೋರೆಕಾಯಿ, ಬೀಟ್‌ರೂಟ್, ಹೀರೆಕಾಯಿ, ಹಾಗಲಕಾಯಿ, ಅವರೆಕಾಯಿ, ಬೀನ್ಸ್, ಆಲೂಗಡ್ಡೆ, ಚವಳೆಕಾಯಿ, ತೊಂಡೆಕಾಯಿ ದರವು ಕಳೆದ ವಾರದಂತೆ ಈ ವಾರವೂ ಯಥಾಸ್ಥಿತಿಯಲ್ಲೇ ಮುಂದುವರಿದಿದೆ.

ಕರಿಬೇವು ಒಂದು ಕೆಜಿಗೆ ₹60, ಈರುಳ್ಳಿ ಸೊಪ್ಪು ಕೆಜಿಗೆ ₹50–₹60 ದರವಿದೆ.

ಸೊಪ್ಪುಗಳ ದರ:

ತರಕಾರಿ ದರದಲ್ಲಿ ಏರಿಳಿತವಾದಂತೆ ಸೊಪ್ಪುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ದರವೂ ಹೆಚ್ಚಳವಾಗಿಲ್ಲ. ಮೆಂತ್ಯೆ, ಸಬ್ಬಸಗಿ ಸೊಪ್ಪು ದೊಡ್ಡ ಕಟ್ಟು ₹10ಗೆ ಒಂದು ₹20ಗೆ ಮೂರು ಕಟ್ಟು, ಪಾಲಕ್‌, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು, ಪುದೀನಾ, ಕೋತಂಬರಿ ₹15–₹20 ಕಟ್ಟು ಮಾರಾಟ ಮಾಡಲಾಗುತ್ತಿದೆ.

ಬೇಸಿಗೆ ಕಾಲದಲ್ಲಿ ತರಕಾರಿ ದರ ಹೆಚ್ಚಳ ಸಾಮಾನ್ಯ. ಅಲ್ಲದೇ ಈ ಬಾರಿ ತುಸು ಬೇಗನೆ ಕೆಲ ತರಕಾರಿ ದರದಲ್ಲಿ ಹೆಚ್ಚಳವಾಗಿದೆ
ಬಸು ಚಿಂತನಹಳ್ಳಿ ತರಕಾರಿ ವ್ಯಾಪಾರಿ
ಕಳೆದ ವಾರದಲ್ಲಿ ತರಕಾರಿ ದರ ಏರಿಕೆಯಾಗಿರಲಿಲ್ಲ. ಈ ವಾರ ತುಸು ಹೆಚ್ಚಾಗಿದ್ದು ಕೆಲ ತರಕಾರಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ
ಸಂತೋಷಮ್ಮ ಹೊಸಳ್ಳಿ ಗ್ರಾಹಕಿ
ನಿಂಬೆಹಣ್ಣು, ಸೌತೆಕಾಯಿ ದರ ಹೆಚ್ಚಳ
ಜಿಲ್ಲೆಯಲ್ಲಿ ನಿಧಾನವಾಗಿ ಬೇಸಿಗೆ ಆರಂಭವಾಗುತ್ತಿದ್ದು ನಿಂಬೆಹಣ್ಣು ಸೌತೆಕಾಯಿ ದರ ಹೆಚ್ಚಳವಾಗಿದೆ. ಸಗಟು ದರದಲ್ಲಿ ನಿಂಬೆಹಣ್ಣು ₹10ಗೆ ಮೂರು ಚಿಲ್ಲರೆ ಮಾರಾಟದಲ್ಲಿ ₹10ಗೆ ಎರಡು ಮಾರಾಟ ಮಾಡಲಾಗುತ್ತಿದೆ. ಕಳೆದ ಎರಡು ವಾರಗಳಿಂದ ಪ್ರತಿ ಕೆಜಿ ಸೌತೆಕಾಯಿ ₹60ಗೆ ಮಾರಾಟವಾಗುತ್ತಿತ್ತು. ಈಗ ₹20 ಹೆಚ್ಚಳವಾಗಿದ್ದು ಬೇಡಿಕೆಯೂ ಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ₹80ಗೆ ಒಂದು ಕೆಜಿ ಸೌತೆಕಾಯಿ ಮಾರಾಟ ಮಾಡಲಾಗುತ್ತಿದೆ. ಬೇಸಿಗೆ ಸೀಸನ್‌ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸಿದ್ದು ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ಕಂಡು ಬರುತ್ತಿದೆ. ಇದರ ಜೊತೆಗೆ ಕರಬೂಜ ಹಣ್ಣುಗಳನ್ನು ತಳ್ಳುಗಾಡಿಯಲ್ಲಿಟ್ಟು ಮಾರಾಟ ಮಾಡುವುದು ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT