ಯಾದಗಿರಿ: ‘ವಿಶ್ವಕರ್ಮರ ಸಮಾಜ ಅನಾದಿ ಕಾಲದಿಂದಲೂ ವಿಶ್ವಕ್ಕೆ ಸುಂದರ ರೂಪವನ್ನು ಕೊಡುವಲ್ಲಿ ಸಮಾಜ ಶ್ರಮಿಸುತ್ತಾ ಬಂದಿದೆ’ ಎಂದು ಯಾದಗಿರಿಯ ಆನೆಗುಂದಿ ಸರಸ್ವತಿ ಪೀಠಾಧಿಪತಿ ಕುಮಾರ ಮಹಾಸ್ವಾಮೀಜಿ ಹೇಳಿದರು.

ಯಾದಗಿರಿ ನಗರದ ವಿಶ್ವನಾಥ ರೆಡ್ಡಿ ಸಭಾಂಗಣದಲ್ಲಿ ಆಯೋಜಿಸಿದ್ದ ಭಗವಾನ್ ವಿಶ್ವಕರ್ಮ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ಪುರಾಣಗಳ ಪ್ರಕಾರ ವಿಶ್ವಕರ್ಮರು ಪ್ರಪಂಚವನ್ನು ಸೃಷ್ಠಿಸಿದವರು. ರಾಮಾಯಾಣದಲ್ಲಿ ಬರುವ ಶ್ರೀಲಂಕಾ ಹಾಗೂ ಮಹಾಭಾರತದ ಇಂದ್ರಪ್ರಸ್ಥ ಪ್ರದೇಶಗಳಲ್ಲಿ ಭವ್ಯ ಅರಮನೆಯನ್ನು ವಿಶ್ವಕರ್ಮರು ನಿರ್ಮಿಸಿದ್ದರು ಎಂಬುದನ್ನು ನಾವು ಕಾಣಬಹುದು’ ಎಂದರು.

‘ಶಿಕ್ಷಣದಿಂದ ಬದಲಾವಣೆ ಸಾಧ್ಯವಾಗಿದ್ದು, ಪ್ರತಿ ಕುಟುಂಬವೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಸಾಹಿತಿ ವೆಂಕಟೇಶ ಕಲಕಂಬ ಮಾತನಾಡಿ, ‘ಅಮರ ಶಿಲ್ಪಿ ಜಕಣಾಚಾರಿ ಅವರು ತಮ್ಮ ಕಲಾ ನೈಪುಣ್ಯತೆಯ ಮೂಲಕ ವಿಖ್ಯಾತ ಬೇಲೂರು ಮತ್ತು ಹಳೆಬೀಡಿಗೆ 900 ವರ್ಷ ತುಂಬುವ ಕಾಲದಲ್ಲಿದ್ದರೂ ಇಂದಿಗೂ ತನ್ನ ಮಹತ್ವವನ್ನು ಹಾಗೂ ಹಲವಾರು ವಿಶೇಷತೆಯನ್ನು ತಿಳಿಸುತ್ತಾ ಬಂದಿದೆ. ಪ್ರಪಂಚ ಸುಂದರವಾಗಿ ಕಾಣುವಂತಾಗಲು ವಿಶ್ವಕರ್ಮರ ಕೊಡುಗೆ ಕಾರಣ’ ಎಂದರು.

ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ವಿಶ್ವಕರ್ಮ ಮಾತನಾಡಿ, ‘ವಿಶ್ವಕರ್ಮ ಸಮುದಾಯದವರ ಕೈಯಲ್ಲಿ ಕಲ್ಲುಗಳು ಕೂಡ ಶಿಲೆಯಾಗಿ ಅರಳುತ್ತವೆ. ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡ ಈ ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಮುದಾಯದ ಮುಖಂಡರು ಶ್ರಮಿಸಬೇಕಿದೆ’ ಎಂದರು.

2024-25ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು.

ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಅಶೋಕ ಚಂಡ್ರಕಿ, ರಮೇಶ ವಿಶ್ವಕರ್ಮ ಹತ್ತಿಕುಣಿ, ನಿಂಗಣ್ಣ ವಿಶ್ವಕರ್ಮ ಸಾಲೋಟಗಿ ಉಪಸ್ಥಿತರಿದ್ದರು.

ಸಿಂಚನಾ ಮಾಮಣಿ ಮತ್ತು ಸಾದ್ವಿ ಪ್ರಾರ್ಥಿಸಿದರು. ಶರಣಬಸಪ್ಪ ವಠಾರ ತಂಡದವರು ನಾಡಗೀತೆ ಹಾಡಿದರು. ಮಹೇಶ ಪತ್ತಾರ ದೋರನಹಳ್ಳಿ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.