ಉಭಯ ಜಲಾಶಯಗಳಿಗೆ ಸದ್ಯ ಒಳಹರಿವು ಅಣೆಕಟ್ಟುಗಳ ಮೇಲ್ಭಾಗದ ಪ್ರದೇಶ, ಮಹಾರಾಷ್ಟ್ರ, ರಾಜ್ಯ ಸೇರಿದಂತೆ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣವನ್ನು ಅವಲಂಬಿಸಿದೆ. ಮಳೆ ಪ್ರಮಾಣ ತಗ್ಗಿದರೆ ಒಳಹರಿವು ಕಡಿಮೆಯಾಗುತ್ತದೆ. ಒಂದೊಮ್ಮೆ ಮಳೆ ಹೆಚ್ಚಾದರೆ ಒಳಹರಿವು ಹೆಚ್ಚಾಗಿ ಜಲಾಶಯಗಳಿಂದ ನದಿಗೆ ನೀರು ಹರಿಸುವುದನ್ನು ಹೆಚ್ಚಿಸಲಾಗುತ್ತದೆ.