ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಯನಾಡ್‌ ಸಂತ್ರಸ್ತರ ನಿಧಿಗೆ ₹ 4.57 ಲಕ್ಷ

Published 9 ಆಗಸ್ಟ್ 2024, 16:18 IST
Last Updated 9 ಆಗಸ್ಟ್ 2024, 16:18 IST
ಅಕ್ಷರ ಗಾತ್ರ

ಕನಕಪುರ: ವಯನಾಡ್‌ನ ನೆರೆ ಸಂತ್ರಸ್ತರಿಗಾಗಿ ರೂರಲ್ ಎಜುಕೇಶನ್ ಸೊಸೈಟಿ ನೇತೃತ್ವದಲ್ಲಿ ಶುಕ್ರವಾರ ನೆರೆ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಿಸಲಾಯಿತು. ಆರ್.ಇ.ಎಸ್. ಅಧ್ಯಕ್ಷ ಎಚ್.ಕೆ.ಶ್ರೀಕಂಠ ನೆರೆ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಣೆಗೆ ಚಾಲನೆ ನೀಡಿದರು.

‘ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ಮಾನವೀಯತೆ, ನಗರದ ಜನತೆ, ಉದ್ಯಮಿಗಳು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಕೈಜೋಡಿಸಿ ಸಂಗ್ರಹ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ’ ಎಂದರು.

ಆರ್.ಇ.ಎಸ್ ಶಾಲಾ–ಕಾಲೇಜು ವಿದ್ಯಾರ್ಥಿಗಳು ನಾಲ್ಕು ತಂಡಗಳಾಗಿ ಪಟ್ಟಣ ಪ್ರದೇಶ, ಬಡಾವಣೆಗಳು, ಜನವಸತಿ ಪ್ರದೇಶಗಳಿಗೆ ತೆರಳಿ ನೆರೆ ಸಂತ್ರಸ್ತರ ನೆರವಿಗೆ ಆಹಾರಧಾನ್ಯ, ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದರು. ಹಣದ ರೂಪದಲ್ಲಿ ₹ 4,57,000 ಧನ ಸಂಗ್ರಹವಾಗಿದೆ. ರೂರಲ್ ಕಾಲೇಜಿನಲ್ಲಿ ನೆರೆ ಸಂತ್ರಸ್ತರ ಪರಿಹಾರ ನಿಧಿಯ ಸಂಗ್ರಹ ಕೇಂದ್ರವನ್ನು ತೆರೆಯಲಾಗಿದ್ದು, ಶನಿವಾರ ಮಧ್ಯಾಹ್ನ 4ರವರೆಗೆ ನಿಧಿ ಸಂಗ್ರಹ ಕೇಂದ್ರವು ಕಾರ್ಯನಿರ್ವಹಿಸಲಿದೆ.

ಉದ್ಯಮಿ ಗುಂಡಣ್ಣ, ಆರ್‌ಇಎಸ್ ಕಾರ್ಯದರ್ಶಿ ಪುಟ್ಟಸ್ವಾಮಿ, ನಿರ್ದೇಶಕರು, ಪ್ರಾಂಶುಪಾಲ ಎಂಟಿ ಬಾಲಕೃಷ್ಣ, ಉಪ ಪ್ರಾಂಶುಪಾಲ ದೇವರಾಜು, ವಾಣಿಜ್ಯಶಾಸ್ತ್ರ ವಿಭಾಗದ ತಮಣ್ಣ ಗೌಡ, ಎನ್ ಸಿ ಸಿ ಆಫೀಸರ್ ವಿಜಯೇಂದ್ರ, ಶಿಕ್ಷಕ ಟಿ ವಿ ಎನ್ ಪ್ರಸಾದ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಕಬ್ಬಾಳೇಗೌಡ ಹಾಗೂ ಆಡಳಿತ ಮಂಡಳಿ ಸದಸ್ಯರು, ಕನಕಾಂಬರಿ ಆಡಳಿತ ಮಂಡಳಿ ಸದಸ್ಯರು ವಿಧಿ ಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT